ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ನೈಟ್ ಕ್ಲಬ್ ಅಗ್ನಿ ದುರಂತಹ ನಂತರ ನಿಯಮವನ್ನು ಉಲ್ಲಂಘಿಸುವ ನೈಟ್ ಕ್ಲಬ್ ಗಳ ವಿರುದ್ದ ಕ್ರಮ ಕೈಗೊಳ್ಳುವ ಅಭಿಯಾನವನ್ನೇ ಗೋವಾ ಸರ್ಕಾರ ಆರಂಭಿಸಿದೆ. ಈ ಅಭಿಯಾನದ ಒಂದು ಭಾಗವಾಗಿ ಗೋವಾದ ವಾಗಾತೋರ್ ನಲ್ಲಿರುವ “ಗೋಯಾ” ನೈಟ್ ಕ್ಲಬ್ ನ್ನು  (Goaya Night Club) ಜಂಟಿ ಸಮೀತಿಯ ಸೀಲ್ ಮಾಡಿದೆ.

ರಾಜ್ಯ ಸರ್ಕಾರವು ನಿಯುಕ್ತಿಗೊಳಿಸಿರುವ ಕಬೀರ್ ಶಿರಗಾಂವಕರ್ (ಪಿಡಬ್ಲ್ಯುಡಿ ಎಂಜಿನೀಯರ್) ನೇತೃತ್ವದ ಸಮೀತಿಯು ನಿಖಿಲ್ ಪಾಲೇಕರ್ (ಪೋಲಿಸ್ ಇನ್ಸಪೆಕ್ಟರ್ ಎಸ್ಕಾರ್ಟ), ಸುಶೀಲ್ ಮೋರಸ್ಕರ್ (ಅಗ್ನಿಶಾಮಕ ದಳದ ಅಧಿಕಾರಿ), ಆಶಿಶ್ ರಜಪೂತ್ (ಕಾರ್ಯನಿರ್ವಾಹಕ ಎಂಜಿನೀರ್), ರವರ ನೇತೃತ್ವದ ಸಮೀತಿಯು ಈ ಕಾರ್ಯಾಚರಣೆ ಕೈಗೊಂಡಿದೆ.

ಕೃಷಿ ಜಮೀನಿನಲ್ಲಿ ಕ್ಲಬ್ ನಿರ್ಮಾಣ, ಕ್ಲಬ್ ನ ಕೆಲವು ಪರವಾನಗಿಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಈ ಸಮೀತಿಯು ಕಠಿಣ ನಿರ್ಧಾರ ಕೈಗೊಂಡು ಕ್ಲಬ್ ಸೀಲ್ ಮಾಡಿದೆ. ಇಷ್ಟೇ ಅಲ್ಲದೆಯೇ ಕ್ಲಬ್ ನಲ್ಲಿ ಭ್ರಧ್ರತೆ ಪರಿಶೀಲನೆಯನ್ನು ಸಮೀತಿಯು ನಡೆಸಿತ್ತು.