ಸುದ್ಧಿಕನ್ನಡ ವಾರ್ತೆ
Goa: ಕರ್ನಾಟಕದ ಬೆಳಗಾವಿಯಿಂದ ಅಕ್ರಮವಾಗಿ ಗೋವಾಕ್ಕೆ ಕಾರಿನಲ್ಲಿ ತರಲಾಗುತ್ತಿದ್ದ ಗೋಮಾಂಸವನ್ನು ಪೋಲಿಸರು ಜಫ್ತಿ ಮಾಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಅಕ್ಟೋಬರ್ 2 ಗಾಂಧೀಜಯಂತಿಯಂದು ಕರ್ನಾಟಕದ ಬೆಳಗಾವಿಯಿಂದ ಗೋವಾಕ್ಕೆ ಬಂದ ಸ್ವಿಫ್ಟ ಡಿಸೈರ್ ಕಾರಿನಿಂದ 120 ಕೆಜಿ ಗೋಮಾಂಸ ಜಫ್ತಿ ಮಾಡಿರುವ ಘಟನೆ ನಡೆದಿದೆ.
ಈ ಕುರಿತಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ಗೋವಾದ ಕೇರಿ ಚೆಕ್ ಪೋಸ್ಟನಲ್ಲಿ ವಾಹನಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಸ್ವಿಫ್ಟ ಕಾರ್ ನ ಡಿಕ್ಕಿಯಲ್ಲಿ ಗೋಮಾಂಸ ಪತ್ತೆಯಾಗಿದೆ. ಇದಕ್ಕೆ ಯಾವುದೇ ರೀತಿಯ ಪರವಾನಗಿಯಾಗಲೀ ಅಥವಾ ಕಾಗದಪತ್ರಗಳಾಗಲೀ ಇಲ್ಲದ ಕಾರಣ ಪೋಲಿಸರು ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇರಫಾನ್ ಸೈಯ್ಯದ್ ಎಂಬ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.
ಈ ಗೋಮಾಂಸದ ಮೌಲ್ಯ 13000 ರೂ ಎಂದು ಅಂದಾಜಿಸಲಾಗಿದೆ. ಪೋಲಸರು ಬಂಧಿತ ಆರೋಪಿ ಇರಫಾನ್ ವಿರದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಳಪೈ ಪೋಲಿಸ್ ನಿರೀಕ್ಷಕ ವಿದೇಶ ಶಿರೋಡಕರ್ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕ ಪ್ರಥಮೇಶ ನಾಯ್ಕ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.