ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಕೈಟಾ ನಾಲಾ ಸೇತುವೆ ಕೆಲಸ ಪ್ರಾರಂಭವಾಗಿದೆ.
ತಾಲೂಕಿನ ಪುಣ್ಯ ಕ್ಷೆತ್ರ ಉಳವಿಗೆಸಂಪರ್ಕಿಸುವ ಕೈಟಾ ನಾಲಾ ಕ್ಕೆ ಹೊಸ ಸೇತುವೆ ನಿರ್ಮಾಣದ ಕೆಲಸ ಪ್ರಾರಂಭ ವಾಗಿದೆ .ಕಳೆದ ಆರು ತಿಂಗಳು ಗಳಿಂದ ಗುಂದ ಉಳವಿ ಮಾರ್ಗದಲ್ಲಿ ಬಸ್ ಗಳು ಓಡಾಡದೆ ಜೋಯಿಡಾ ಉಳವಿ ಗುಂದ ಸುತ್ತು ಬಳಸಿ ಬಸ್ ಓಡಾಡುತ್ತಿದ್ದು ಕೈಟಾ ನಾಲಾ ಹೊಸ ಸೇತುವೆ ಕೆಲಸದಿಂದ ಜನರು ಸಮಾಧಾನ ಪಟ್ಟಿದ್ದು ಸೇತುವೆ ಕೆಲಸ ಬೇಗನೇ ಮುಗಿದು ಜನರ ಓಡಾಟಕ್ಕೆ ಅನುಕೂಲ ವಾಗಲಿ ಎಂದು ಹೇಳುತ್ತಿದ್ದಾರೆ.

ಕಳೆದ ಆರು ತಿಂಗಳು ಗಳಿಂದ ಗುಂದ ಉಳವಿ ಭಾಗದ ಜನರು ತೊಂದರೆ ಪಡುವುದನ್ನು ನಂದಿಗದ್ದಾ ( ಗುಂದ )ಗ್ರಾಮ ಪಂಚಾಯತದ ಅಧ್ಯಕ್ಷ ಅರುಣ ದೇಸಾಯಿ ಶಾಸಕರಾದ ಆರ್ ವಿ ದೇಶಪಾಂಡೆ ಅವರ ಗಮನಕ್ಕೆ ತಂದಿದ್ದರು ಗ್ರಾಮ ಪಂಚಾಯತ ಮನವಿಗೆ ಸ್ಪಂದಿಸಿದ ಶಾಸಕರು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ್ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಕೊಂಡ ಹಿನ್ನೆಲೆಯಲ್ಲಿ ಸೇತುವೆ ಕೆಲಸ ಪ್ರಾರಂಭ ವಾಗಿದೆ.

ಕೈಟಾ ನಾಲಾ ಸೇತುವೆ ಕೆಲಸ ದಿಂದ ಓಡಾಡುವ ಜನತೆಗೆ ತೊಂದರೆ ಆಗಬಾರದು ಎಂದು ಇಲಾಖೆ ಬದಲಿ ಮಾರ್ಗವನ್ನು ಸೇತುವೆ ಪಕ್ಕದಲ್ಲಿ ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದೆ.

ಬರುವ ಪೆಬ್ರುವರಿ 3 ರಂದು ಶ್ರೀ ಕ್ಷೆತ್ರ ಉಳವಿ ಯಲ್ಲಿ ಶ್ರೀ ಚನ್ನಬಸವಣ್ಣ ನವರ ಜಾತ್ರಾ ಮಹೋತ್ಸವ ನಡೆಯಲಿದೆ ಹಾಗಾಗಿ ಗುಂದ ಮಾರ್ಗ ದಲ್ಲಿ ಸಾವಿರಾರು ಜನರು ಪಾದಯಾತ್ರೆ ಯ ಮೂಲಕ ಬರುವವರಿದ್ದು,ಜೊತೆಗೆ ಚಕ್ಕಡಿ ಗಾಡಿಗಳು ಸಾವಿರಾರು ಸಂಖ್ಯೆಯಲ್ಲಿ ಬರುವ ವರೂ ಕೂಡ. ಇದೇ ಮಾರ್ಗದಲ್ಲಿ ಬರುವುದ ರಿಂದ ಗುಂದ ಉಳವಿ ಮಾರ್ಗ ಸದಾ ಜನರಿಂದ ತುಂಬಿರುತ್ತದೆ ಹೊಸ ಸೇತುವೆ ಕೆಲಸ ಮುಗಿಯದೇ ಇದ್ದರೂ ಬದಲಿ ಮಾರ್ಗ ದಿಂದ ಓಡಾಡ ಬಹುದು ಎಂದು ಕೆಲಸ ನಡೆದಿದೆ.