ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಬಾಮಣಗಿ ಶಾಲೆಯಲ್ಲಿ ಶೃದ್ಧಾ ಭಕ್ತಿಯಿಂದ ಶಾರದಾ ಮಾತೆಯ ಪೂಜನ ಕಾರ್ಯಕ್ರಮ ಇಂದು ಶುಕ್ರವಾರ ನಡೆಯಿತು.

ಬಾಮಣಗಿ ಶಾಲೆಯ ಪರಿಸರದ ಪಾಲಕರು,ಪೋಷಕರು,ಶಿಕ್ಷಕರು,ಮಕ್ಕಳು ಅಲಂಕರಿಸಿದ ಭವ್ಯ ಮಂಟಪದಲ್ಲಿ ವಿದ್ಯೆಯ ಅಧಿ ದೇವತೆಯಾದ ಶಾರದಾ ಮಾತೆಯ ಭಾವಚಿತ್ರವನ್ನು ಇಟ್ಟು, ಊರಿನ ಹಿರಿಯರಾದ ತೋಪೋ ಮಿರಾಶಿಯವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸುಭಾಷ ಗಾಂವ್ಕರ,ಉಪಾಧ್ಯಕ್ಷರಾದ ಸುಮಿತ್ರಾ ಬಾದವನಕರ, ಸದಸ್ಯರು,ಪಾಲಕರು,ಪೋಷಕರು,ಮಾತೆಯರು,ಶಿಕ್ಷಕರು,ಮಕ್ಕಳ ಉಪಸ್ಥಿತಿಯಲ್ಲಿ ಭಜನೆ,ಆರತಿ ಕಾರ್ಯಕ್ರಮ ನಡೆಯಿತು.ನಂತರ ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ ಎಲ್ಲರಿಗೂ ಅನ್ನಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನದ ವೇಳೆ ಶಾಲೆಯ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ನೃತ್ಯ ಕಾರ್ಯಕಮ ನಡೆಯಿತು.

ಕಾರ್ಯಕ್ರಮದಲ್ಲಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ,ಕಾರ್ಯದರ್ಶಿಗಳಾದ ಮಹಾದೇವ ಹಳದನಕರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಿಶಾಲಾಕ್ಷಿ ನಾಯ್ಕ,ರೋಹಿದಾಸ ಮಡಿವಾಳ,ಎಸ್ ಬಿ ಸಿಂದೆ, ಅಕ್ಕಪಕ್ಕದ ಶಾಲೆಯ ಶಿಕ್ಷಕ ವೃಂದದವರು,ಬಾಮಣಗಿ ಶಾಲೆಯ ಮುಖ್ಯ ಶಿಕ್ಷಕರಾದ ಕಿರಣಕುಮಾರ ನಾಯ್ಕ,ಸಹ ಶಿಕ್ಷಕಿಯರಾದ ವಂದನಾ ದೇಶಪಾಂಡೆ, ಪಿಲೋಮೀನ ನರೋನ,ಸುಮನಾ, ಅಂಗನವಾಡಿ ಕಾರ್ಯಕರ್ತೆ, ಇನ್ನಿತರರು ಉಪಸ್ಥಿತರಿದ್ದರು.