ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ, ಶೈಕ್ಷಣಿಕ ಜಿಲ್ಲೆ ಶಿರಸಿ (ಉತ್ತರಕನ್ನಡ)ಶ್ರೀ ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ ಇವರ ಸಂಯುಕ್ತಾಶ್ರಯದಲ್ಲಿ ಜೋಯಿಡಾ ತಾಲೂಕಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ ಹಾಗೂ ಕಲೋತ್ಸವ 2025-26 ರ ಕಾರ್ಯಕ್ರಮ ದಿನಾಂಕ:10-12-2025 ರ ಬುಧವಾರ ಉಳವಿಯಲ್ಲಿ ವಿಜ್ರಂಭಣೆಯಿಂದ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್ ರವರು ಮಾತನಾಡಿ ಜೋಯಿಡಾ ತಾಲೂಕಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2025 ರ ಕಾರ್ಯಕ್ರಮದ ಯಶಸ್ಸಿಗೆ ತಾಲೂಕಿನ ಸಾಕಷ್ಟು ಗಣ್ಯರ ಸಹಕಾರವಿದೆ.ಯಾವುದೇ ಶೈಕ್ಷಣಿಕ ಕಾರ್ಯಕ್ರಮ ಕೇವಲ ಇಲಾಖೆಯಿಂದ ಮಾತ್ರ ಆಯೋಜಿಸಲು ಆಗದೇ,ಸಮುದಾಯದ ಸಹಭಾಗಿತ್ವ ಇದ್ದಲ್ಲಿ ಕಾರ್ಯಕ್ರಮದ ಯಶಸ್ಸನ್ನು ಸಾಧಿಸಬಹುದು,ಸ್ಪರ್ಧಾ ಕಾರ್ಯಕ್ರಮದ ಬಹುಮಾನದ ಪ್ರಾಯೋಜಕತ್ವ ನೀಡಿದ ಉಳವಿ ಗ್ರಾಮ ಪಂಚಾಯತನವರಿಗೆ, ಕಾರ್ಯಕ್ರಮದ ವೇದಿಕೆಯ ವ್ಯವಸ್ಥೆ,ಉಟೋಪಚಾರ ವ್ಯವಸ್ಥೆ ಮಾಡಿದ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಎಲ್ಲರಿಗೂ,ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದಿಸಿದರು. ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಸಿ.ಆರ್.ಪಿ ಗಳಾದ ಭಾಸ್ಕರ ಗಾಂವ್ಕರ ನಡೆಸಿಕೊಟ್ಟರು. ಕಾರ್ಯಕ್ರಮದ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್,ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ, ಕಾರ್ಯದರ್ಶಿಗಳಾದ ಮಹಾದೇವ ಹಳದನಕರ,ದೈಹಿಕ ಶಿಕ್ಷಣ ಪರಿವೀಕ್ಷಕಿಯರಾದ ವಿಜಯಲಕ್ಷ್ಮೀ ಮೇಡಂ,ಪರಮೇಶ್ವರ ಹರಿಕಾಂತ, ರಮೇಶ ಪಡಸಲಗಿ, ಗ್ರಾಮ ಪಂಚಾಯತ ಸದಸ್ಯರು,ಇನ್ನುಳಿದ ಪ್ರಮುಖರು ಶಿಕ್ಷಕರು,ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಇದ್ದರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕವನ ವಾಚನ, ಕಂಠಪಾಠ, ಧಾರ್ಮಿಕ ಪಠಣ, ಅಭಿನಯ ಗೀತೆ, ಆಶು ಭಾಷಣ, ಮಿಮಿಕ್ರಿ,ಭಕ್ತಿ ಗೀತೆ, ಛದ್ಮವೇಷ, ದೇಶ ಭಕ್ತಿಗೀತೆ,ಕ್ಲೇ ಮಾಡೆಲಿಂಗ, ಕಥೆ ಹೇಳುವುದು, ಚಿತ್ರಕಲೆ,ಮಿಮಿಕ್ರಿ, ಭರತನಾಟ್ಯ,ಜಾನಪದ ನೃತ್ಯ, ಸೇರಿದಂತೆ ಇನ್ನಿತರ ಸ್ಪರ್ಧೆಗಳಲ್ಲಿ ಜೋಯಿಡಾ ತಾಲೂಕಿನ ಶಾಲೆಗಳ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವೇದಿಕೆಯ ಮೇಲಿನ ಗಣ್ಯರು ವಿತರಿಸಿದರು.

ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಸಹಕಾರ ನೀಡಿದ ಶಿಕ್ಷಕರುಗಳಿಗೆ ಅಭಿನಂದನಾ ಪತ್ರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿತರಿಸಿದರು. ಉಳವಿ ಚನ್ನಬಸವೇಶ್ವರ ದೇವಸ್ಥಾನದ ವತಿಯಿಂದ ತಯಾರಿಸಿದ ಶುಚಿ,ರುಚಿಯಾದ ಊಟದ ವ್ಯವಸ್ಥೆ,ಅತಿಥಿ ಸತ್ಕಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತ್ಯಕ್ಷ,ಪರೋಕ್ಷ ವಾಗಿ ಸಹಕರಿಸಿದ ಎಲ್ಲರನ್ನೂ ಹೃದಯ ಪೂರ್ವಕವಾಗಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ನರಸಣ್ಣನವರ ವಂದಿಸಿದರು.