ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಉಳವಿಯಲ್ಲಿ ಜಿಲ್ಲಾ ಪಂಚಾಯತ ಉತ್ತರಕನ್ನಡ,ತಾಲೂಕು ಪಂಚಾಯತ ಜೋಯಿಡಾ, ಸಾರ್ವಜನಿಕ ಶಿಕ್ಷಣ ಇಲಾಖೆ ಜೋಯಿಡಾ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಶೈಕ್ಷಣಿಕ ಜಿಲ್ಲೆ ಶಿರಸಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ ನಂದಿಗದ್ದೆ, ಶ್ರೀಚನ್ನಬಸವೇಶ್ವರ ಪ್ರೌಢಶಾಲೆ ಉಳವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜೋಯಿಡಾ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2025-26 ರ ಕಾರ್ಯಕ್ರಮದಲ್ಲಿ ಗುಂದ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಅಮ್ರತಾ ಭಾಗ್ವತ,ಭರತನಾಟ್ಯ,(ಪ್ರಥಮ). ಕುಮಾರಿ ಗೌತಮಿ ದಬ್ಲಿ,ಸಂಸ್ಕೃತ ಧಾರ್ಮಿಕ ಪಠಣ,(ಪ್ರಥಮ).ಸ್ಥಾನ ಪಡೆದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ,ತಾಲೂಕಾ ಪ್ರಾಥಮಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ,ಪದಾಧಿಕಾರಿಗಳು, ಸಿ ಆರ್ ಪಿ ಭಾಸ್ಕರ ಗಾಂವ್ಕರ, ಶಾಲೆಯ ಮುಖ್ಯ ಶಿಕ್ಷಕರಾದ ಜೋಸಫ್ ಸರ್,ಸಹ ಶಿಕ್ಷಕರಾದ ನವೀನ ಶೇಟ್,ಗೋಕುಲ ಸ್ಥಳೇಕರ,ಪುರುಷೋತ್ತಮ ಜಿ,ಪಕೀರಪ್ಪ ದರಿಗೊಂಡ,ದಿವ್ಯಾ ಮೇಡಂ,ರಿಯಾ, ಬಸವರಾಜ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ಪಾಲಕರು, ಪೋಷಕರು, ಗಣ್ಯರು, ಶಿಕ್ಷಣ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.