ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿನ ಬರ್ಚ ಬಾಯ್ ರೋಮಿಯೊ ಲೆನ್ ನೈಟ್ ಕ್ಲಬ್ ನಲ್ಲಿ (Bircha Boy Romeo Lane Night Club) ಸಂಭವಿಸಿದ ಭೀಕರ ಅಗ್ನಿ ಅವಗಢದಲ್ಲಿ 25 ಜನರು ಸಾವನ್ನಪ್ಪಿದ್ದರು. ಈ ಪ್ರಕರಣ ಇದೀಗ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನೈಟ್ ಕ್ಲಬ್ ನಲ್ಲಿ ಡಾನ್ಸ ಮಾಡುತ್ತಿದ್ದ ವಿದೇಶಿ ಮಹಿಳೆ ಭಾರತದಲ್ಲಿ ಬ್ಯುಸನೆಸ್ ವೀಸಾ Business Visa ಪಡೆದುಕೊಂಡಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು ಈ ಮಹಿಳೆ ಕೂಡ ಬಂಧನದ ಭೀತಿ ಎದುರಾಗಿದೆ.

ನೈಟ್ ಕ್ಲಬ್ ಡಾನ್ಸರ್ ಕ್ಲಬ್ ನಲ್ಲಿ ಅಗ್ನಿ ಅವಗಢ ಸಂಭವಿಸುವ ದಿನದ ರಾತ್ರಿ ವೀಡಿಯೊದಲ್ಲಿ ಕ್ರಿಸ್ಟಿನಾ ಎಂಬ ವಿದೇಶಿ ಮಹಿಳೆ “ಮೆಹಬೂಬಾ ಮೆಹಬೂಬಾ ” ಎಂದು ಡಾನ್ಸ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಅದೃಷ್ಠವಶಾತ್ ಕ್ರಿಸ್ಟಿನಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಪರದೇಶಿ ನಾಗರೀಕರ ಪ್ರಾದೇಶಿಕ ನೋಂದಣಿ ಕಾರ್ಯಾಲಯದ ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿ- ವಿದೇಶಿ ಡಾನ್ಸರ್ ಕ್ರಿಸ್ಟಿನಾ ಬಿಸನೆಸ್ ವೀಸಾ ಪಡೆಯಲು ಅರ್ಜಿ ಸಲ್ಲಿದ್ದಳು, ಆದರೆ ಅವರ ಅರ್ಜಿಗೆ ಮಂಜೂರಾತಿ ಲಭಿಸಿರಲಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

ಬ್ಯುಸನೆಸ್ ವೀಸಾ ಮಂಜೂರಾಗದ ಹೊರತುÁ್ಭರತದಲ್ಲಿ India ವ್ಯವಸಾಯಿಕ ನೃತ್ಯ ಪ್ರದರ್ಶನ ಮಾಡಲು ಅಥವಾ ಕೆಲಸ ಮಾಡಲು ಪರವಾನಗಿ ಇರುವುದಿಲ್ಲ. ಇದರಿಂದಾಗಿ ಈಕೆ ಪರವಾನಗಿ ಪಡೆಯದೆಯೇ ನೃತ್ಯ ಮಾಡುತ್ತಿದ್ದಳೇ ಎಂದು ಆಪ್ ಆರ್ ಆರ್ ಒ ತನಿಖೆ ನಡೆಸುತ್ತಿದೆ.