ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಣಜುಣ-ವಾಗಾತೋರ್ ಬೀಚ್ ನಲ್ಲಿ (Wagator Beach) ಅತಿಕ್ರಮಣ ಮಾಡಿದ್ದ ರೋಮಿಯೊ ಲೆನ್ ನೈಟ್ ಕ್ಲಬ್ ಭಾಗವನ್ನು ಮಂಗಳವಾರ ಸಂಜೆ ರಾಜ್ಯ ಪ್ರವಾಸೋದ್ಯಮ ಇಲಾಖೆ ತೆರವು (Demolition)ಕಾರ್ಯಾಚರಣೆ ಕೈಗೊಂಡಿದೆ.
ಗೋವಾದ ಹಡಪಡೆಯಲ್ಲಿರುವ ನೈಟ್ ಕ್ಲಬ್ ನಲ್ಲಿ ಕಳೆದ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಗಡದಲ್ಲಿ 25 ಜನರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವು ರಾಜ್ಯದಲ್ಲಿರುವ ಎಲ್ಲ ಕ್ಲಬ್ ಗಳ ಪರಿಶೀಲನೆಗೆ ಆದೇಶಿಸಿತ್ತು. ಇದೇ ಕ್ಲಬ್ ಮಾಲೀಕರು ವಾತಾಗೋರ್ ಬೀಚ್ ನಲ್ಲಿರುವ ಸರ್ವೆ ನಂ. 213/4, 213/5 ಭೂಮಿಯನ್ನು ಕ್ಲಬ್ ಮಾಲೀಕರು ಅತಿಕ್ರಮಿಸಿದ್ದರು ಎನ್ನಲಾಗಿದೆ.
ಈ ಹುನ್ನೆಲೆಯಲ್ಲಿ ಗೋವಾದ ವಾಗಾತೋರ್ ಬೀಚ್ ನಲ್ಲಿದ್ದ ನೈಟ್ ಕ್ಲಬ್ ಅರ್ಧ ಭಾಗವನ್ನು ತೆರವುಗೊಳಿಸಲಾಗಿದೆ.
ಕಳೆದ ಶನಿವಾರ ಗೋವಾದ ಹಡಪಡೆಯ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಅಗ್ನಿ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಗೋವಾ ಸರ್ಕಾರವು ಈ ನೈಟ್ ಕ್ಲಬ್ ಮಾಲೀಕರ ಆಸ್ತಿಗಳ ಪರಿಶೀಲನೆಯನ್ನೂ ನಡೆಸಿದೆ.
