ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆ ನೈಟ್ ಕ್ಲಬ್ ನಲ್ಲಿ  (Goa Night Club) ಕಳೆದ ಶನಿವಾರ ರಾತ್ರಿ ಭೀಕರ ಅಗ್ನಿ ಅವಘಡವೊಂದ ನಡೆದುಹೋಗಿದೆ. ಈ ಭೀಕರ ಘಟನೆಯಲ್ಲಿ 25 ಜನ ಸಾವನ್ನಪ್ಪಿದ್ದಾರೆ. ಈ ನೈಟ್ ಕ್ಲಬ್ ಪ್ರಸಿದ್ಧ ಬೀಚ್ ಬಳಿಯಿತ್ತು. ಅಂದು ರಾತ್ರಿ ಅಲ್ಲಿ ಪ್ರವಾಸಿಗರು ಬಾಲಿವುಡ್ ಹಾಡುಗಳಿಗೆ (Bollywood songs) ನೃತ್ಯ ಮಾಡುತ್ತಿದ್ದರು. ಅಂದು ರಾತ್ರಿ ಮೊದಲ ಬಾರಿಗೆ (Night duty) ನೈಟ್ ಡ್ಯೂಟಿಯಲ್ಲಿದ್ದ 32 ವರ್ಷದ ರಾಹುಲ್ ತಂತಿ ಎಂಬ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ.

ಈ ನೈಟ್ ಕ್ಲಬ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಹುಲ್ ತಂತಿ ಈತ ಕಳೆದ ಒಂದು ತಿಂಗಳ ಹಿಂದಷ್ಟೇ ತಂದೆಯಾಗಿದ್ದ. ಈತನ ಪತ್ನಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಉದರ ನಿರ್ವಹಣೆಗಾಗಿ ಹಣ ಸಂಪಾದಿಸಲು (Earn money) ಈತ ಆಸ್ಸಾಂನಿಂದ ತಮ್ಮ ಹಳ್ಳಿ ತೊರೆದು ಹಣ ಸಂಪಾದಿಸಲು ಗೋವಾಕ್ಕೆ ಬಂದಿದ್ದ. ತನಗೆ ಮೂತನೇ ಮಗು ಜನಿಸಿದ ನಂತರ ನವೆಂಬರ್ 24 ರಂದು ಈತ ಹಣ ಸಂಪಾದನೆಗಾಗಿ ಗೋವಾಕ್ಕೆ ಬಂದಿದ್ದ. ರಾಹುಲ್ ಗೆ 9 ಮತ್ತು 6 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಆಸ್ಸಾಂ ಹಳ್ಳಿಯಲ್ಲಿ ತೋಟದಲ್ಲಿ ಕೆಲಸಕ್ಕೆ ಹೋದರೆ ದಿನಕ್ಕೆ 200 ರೂ ಕೂಲಿ (200 per day wages) ಸಿಗುತ್ತಿತ್ತು. ಇದರಿಂದ ಈತ ಕುಟುಂಬವನ್ನು ಪೋಷಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಹೆಚ್ಚಿನ ಹಣ ಸಂಪಾದನೆಯ ಉದ್ದೇಶದಿಂದ ಈತ ಗೋವಾಕ್ಕೆ ಬಂದು ಇಲ್ಲಿನ ನೈಟ್ ಕ್ಲಬ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ನೈಟ್ ಕ್ಲಬ್ ನಲ್ಲಿ ಅಗ್ನಿ ಅವಘಡ ಸಂಭವಿಸುವ ದಿನ ಅವರ ಮೊದಲ ದಿನದ ನೈಟ್ ಡ್ಯೂಟಿಯಾಗಿತ್ತು. ಅಂದೇ ಈ ಭೀಕರ ಅಗ್ನಿ ದುರಂತದಲ್ಲಿ ರಾಹುಲ್ ಜೀವ ಕಳೆದುಕೊಂಡಿದ್ದಾನೆ.
ಕುಟುಂಬಕ್ಕೆ ಈತನೇ ಆಧಾರವಾಗಿದ್ದ, ಇದೀಗ ಈತನ ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.