ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕವಡಿಕೆರೆಯ ಶ್ರೀ ದುರ್ಗಾ ಪರಮೇಶ್ವರಿಯ ಸನ್ನಿಧಿಯಲ್ಲಿ ದುರ್ಗಾ ಮಂತ್ರ ಹವನವು ನೆರವೇರಿತು.

ಕೃಷಿಕರ ಜೀವನಾಡಿಯಾಗಿರುವ ಅಡಿಕೆ ಬೆಳೆಗೆ ವ್ಯಾಪಕವಾಗಿ ಹರಡುತ್ತಿರುವ ಎಲೆ ಚುಕ್ಕಿ ರೋಗದ ನಿವಾರಣೆಗೆ ಶ್ರೀ ಕ್ಷೇತ್ರ ಕವಡಿಕೆರೆಯಲ್ಲಿ ರುದ್ರ ಮಂತ್ರದ ಅನುಷ್ಠಾನ ನಡೆಯಿತು. ಪರಮ ಪೂಜ್ಯರ ಮಾರ್ಗದರ್ಶನದಲ್ಲಿ ಈ ಅನುಷ್ಠಾನವನ್ನು ಯಲ್ಲಾಪುರ ಸೀಮಾ ವ್ಯಾಪ್ತಿಯಲ್ಲಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗುರು ಭಿಕ್ಷಾ ಸೇವೆ, ಪಾದಪೂಜೆ, ಮಾತೆಯರು ಸ್ತೋತ್ರ ಹಾಗೂ ಭಗವದ್ಗೀತಾ ಪಠಣವನ್ನು ಮಾಡಿದರು.

ಈ ಎಲ್ಲ ಧಾರ್ಮಿಕ ಅನುಷ್ಠಾನದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ಧು ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.