ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದ ಜನತೆ ಇದೀಗ ಶಿರಡಿ ಮತ್ತು ತಿರುಪತಿಗೆ (Shirdi and Tirupati) ದೇವದರ್ಶನಕ್ಕೆ ತೆರಳಲು ಇನ್ನಷ್ಟು ಸುಲಭವಾಗಲಿದೆ. ರಾಜ್ಯಸಭಾ ಸದಸ್ಯ ಸದಾನಂದ ತಾನಾವಡೆ ರವರು ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. “ಉಡಾನ” ಯೋಜನೆಯ ಅಡಿಯಲ್ಲಿ ಗೋವಾದಿಂದ ಶಿರ್ಡಿ ಹಾಗೂ ತಿರುಪತಿಗೆ ನೇರ ವಿಮಾನ ಸೇವೆ ( Direct flight) ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ. ಇದರಿಂದಾಗಿ ಗೋವಾದ ಭಕ್ತಾದಿಗಳಿಗೆ ಧಾರ್ಮಿಕ ಸ್ಥಳಕ್ಕೆ ತೆರಳಲು ಇನ್ನಷ್ಟು ಸುಲಭವಾಗಲಿದೆ.
ಶಿರ್ಡಿ ಹಾಗೂ ತಿರುಪತಿ ಕ್ಷೇತ್ರವು ಗೋವಾದಲ್ಲಿರುವ ಭಕ್ತಾದಿಗಳಿಗೆ ಅತ್ಯಂತ ಶೃದ್ಧೆ ಹಾಗೂ ಮಹತ್ವದ್ದಾಗಿದೆ. ಗೋವಾದಿಂದ ಈ ಕ್ಷೇತ್ರಗಳಿಗೆ ನೇರ ವಿಮಾನ ಸೌಲಭ್ಯ ಇಲ್ಲದ ಕಾರಣ ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಇದರಿಂದಾಗಿ ಗೋವಾದಿಂದ ಈ ಕ್ಷೇತ್ರಗಳಿಗೆ ತೆರಳಬೇಕಾದರೆ ಹೆಚ್ಚು ದೂರ ಮತ್ತು ಹೆಚ್ಚು ಸಮಯದ ಪ್ರಯಾಣ ಬೆಳೆಸುವ ಅನಿವಾರ್ಯತೆಯಿದೆ ಎಂದು ರಾಜ್ಯ ಸಭಾ ಸದಸ್ಯ ಸದಾನಂದ ತಾನಾವಡೆ ಸ್ಪಷ್ಟಪಡಿಸಿದ್ದಾರೆ.
ಕನೆಕ್ಟಿಂಗ್ ಪ್ಲೈಟ್ ಮೂಲಕ ಪ್ರವಾಸ ಮಾಡಿದರೆ ಹೆಚ್ಚಿನ ಹಣ ವ್ಯಯವಾಗುತ್ತದೆ. ನೇರ ವಿಮಾನ ಸೌಲಭ್ಯ ಇಲ್ಲದ ಕಾರಣ ಗೋವಾದಲ್ಲಿರುವ ಭಕ್ತಾದಿಗಳಿಗೆ ಶಿರ್ಡಿ ಹಾಗೂ ತಿರುಪತಿ ಯಾತ್ರೆ ಹೆಚ್ಚು ಖರ್ಚಿನ ಯಾತ್ರೆಯಾಗುತ್ತಿದೆ ಎಂದು ವಿನಯ್ ತೆಂಡುಲ್ಕರ್ ಹೇಳಿದ್ದಾರೆ.
ಉಡಾನ ಯೋಜನೆಯ ಅಡಿಯಲ್ಲಿ ಈ ಎರಡೂ ಕ್ಷೇತ್ರಗಳಿಗೆ ನೇರ ವಿಮಾನ ಸೇವೆ ಆರಂಭಿಸಬೇಕು ಎಂದು ರಾಜ್ಯಸಭಾ ಸದಸ್ಯ ಸದಾನಂದ ತಾನಾವಡೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ತಿರುಪತಿ ಹಾಗೂ ಶಿರ್ಡಿಗೆ ನೇರ ವಿಮಾನ ಸೇವೆ ಆರಂಭಗೊಂಡರೆ ಇದರ ಲಾಭ ಗೋವಾಕ್ಕೆ ಮಾತ್ರವಲ್ಲದೆಯೇ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿನ ಭಕ್ತಾದಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ. ಈ ಮನವಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆಯೂ ಸದಾನಂದ ತಾನಾವಡೆ ಮನವಿ ಮಾಡಿದ್ದಾರೆ.
