ಸುದ್ಧಿಕನ್ನಡ ವಾರ್ತೆ
ಪಣಜಿ: ಇಂಡಿಗೊ ಏರ್ಲೈನ್ಸ ಸತತ (Indigo Airlines) ಆಪರೇಶನ್ ಸಮಸ್ಯೆಯಿಂದಾಗಿ ಗೋವಾದಲ್ಲಿ ಸೋಮವಾರ ಕೂಡ ಹಲವು ವಿಮಾನ ಹಾರಾಟ ರದ್ದಾಗಿ ಪ್ರವಾಸಿಗರು ತೊಂದರೆಗೆ ಸಿಲುಕುವಂತಾಗಿದೆ. ಗೋವಾದ ಮೋಪಾ ಅಂತರಾಷ್ಟ್ರೀಯ ವಿಮಾನ (Manohar International Airport) ನಿಲ್ದಾಣ ಹಾಗೂ ದಾಬೋಲಿಂ ವಿಮಾನ ನಿಲ್ದಾಣದಲ್ಲಿ (Dabolim Airport) ಹಲವು ವಿಮಾನ ರದ್ದಾಗಿ ಪ್ರವಾಸಿಗರು ತೊಂದರೆಗೆ ಸಿಲುಕುವಂತಾಗಿದೆ.
ಗೋವಾದ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಇಂಡಿಗೋದ 8 ವಿಮಾನ ಹಾರಾಟ ರದ್ದಾಗಿದೆ. ಇದರಿಂದಾಗಿ ಹೈದರಾಬಾದ್, ಮುಂಬಯಿ, ನಾಗಪುರ, ರಾಜಕೋಟ್, ಹಾಗೂ ಬೆಂಗಳೂರು ಈ ಪ್ರಮುಖ ನಗರಗಳಿಗೆ ತೆರಳುವ ಪ್ರವಾಸಿಗರು ತೊಂದರೆ ಅನುಭವಿಸಿದರು.
ರದ್ದಾದ ವಿಮಾನಗಳು;6E 6124 ಹೈದರಾಬಾದ್, 6E 2133 ಮುಂಬಯಿ, 6 E 122 ನಾಗಪುರ, 6E 154 ರಾಜಕೋಟ್, 6E 945 ಹೈದರಾಬಾದ್, 6 E901 ಬೆಂಗಳೂರು, 6E 6308 ಬೆಂಗಳೂರು, 6E 596 ಮುಂಬಯಿ ವಿಮಾನ ಹಾರಾಟ ರದ್ದಾಗಿದೆ.
ಗೋವಾ ದಾಬೋಲಿಂ ವಿಮಾನ ನಿಲ್ದಾಣದಿಂದ 9 ವಿಮಾನ ರದ್ಧು…
ಸೋಮವಾರ ಗೋವಾ ದಾಬೋಲಿಂ ವಿಮಾನ ನಿಲ್ದಾಣದಿಂದ ಇಂಡಿಗೊ ಕಂಪನಿಯ ಪುಣೆ,ಅಹಮದಾಬಾದ್, ಮುಂಬಯಿ, ಹ್ಯದರಾಬಾದ್, ಬೆಂಗಳೂರು, ದೆಹಲಿ ನಗರಗಳಿಗೆ ವಿಮಾನ ಹಾರಾಟ ರದ್ದಾಗಿ ಪ್ರವಾಸಿಗರು ತೊಂದರೆ ಅನುಭವಿಸಿದರು.
ರದ್ದಾದ ವಿಮಾನಗಳು:-ಪುಣೆ-ಗೋವಾ, ಗೋವಾ-ಹೈದರಾಬಾದ್, ಮುಂಬಯಿ-ಗೋವಾ, ಗೋವಾ ಮುಂಬಯಿ, ಹೈದರಾಬಾದ್ -ಗೋವಾ, ಗೋವಾ -ಹೈದರಾಬಾದ್, ಬೆಂಗಳೂರು-ಗೋವಾ, ಗೋವಾ-ಬೆಂಗಳೂರು, ಮುಂಬಯಿ-ಗೋವಾ, ಗೋವಾ-ಮುಂಬಯಿ, ದಿಲ್ಲಿ-ಗೋವಾ, ಗೋವಾ -ದಿಲ್ಲಿ,ಬೆಂಗಳೂರು-ಗೋವಾ, ಗೋವಾ ಬೆಂಗಳೂರು
ಈ ಎಲ್ಲ ವಿಮಾನ ಹಾರಾಟಗಳು ಸೋಮವಾರ ರದ್ದಾಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.
