ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ): ಮಠದ 550 ನೇಯ ವರ್ಧಂತಿ ಉತ್ಸವ ಹಾಗೂ ಮಠದ ನವೀಕರಣ ಕಾಮಗಾರಿ , ಶ್ರೀರಾಮನಾಮ ಜಪ, ಶ್ರೀರಾಮ ದಿಗ್ವಿಜಯ ರಥಯಾತ್ರೆ , ಮಠದ ಈ ಎಲ್ಲ ಸೇವಾ ಕಾರ್ಯದಲ್ಲಿ ಮಠಾನುಯಾಯಿಗಳು ಹೆಚ್ಚು ಶ್ರಮಿಸಬೇಕಾಯಿತು. 550 ನೇಯ ವರ್ಷದ ವರ್ಧಂತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಈ ಸ್ಫರ್ಧಾತ್ಮಕ ಪರೀಕ್ಷೆ ಹೆಚ್ಚು ಕಠಿಣವಾಗಿತ್ತು. ಆದರೆ ಮಠಾನುಯಾಯಿಗಳ ಮಠ ಹಾಗೂ ಗುರುಭಕ್ತಿಯಿಂದಾಗಿ ಇವೆಲ್ಲವೂ ಸಾಧ್ಯವಾಯಿತು ಎಂದು ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮಿಜಿ ನುಡಿದರು.

ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ನೇಯ ವರ್ಧಂತಿ ಉತ್ಸವದ ಅಂಗವಾಗಿ ನವೆಂಬರ್ 27 ರಿಂದ ಡಿಸೆಂಬರ್ 7 ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿಸೆಂಬರ್ 7 ರಂದು ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಪರ್ತಗಾಳಿ ಮಠದ ಪೀಠಾಧಿಪತಿಗಳಾದ ಶ್ರೀಮದ್ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಆಶೀರ್ವಚನ ನೀಡಿದರು.

ಪರ್ತಗಾಳಿ ಮಠದಲ್ಲಿ ದಶಮಿ ಹಾಗೂ ಏಕಾದಶಿಯ ಧಾರ್ಮಿಕ ಕಾರ್ಯಕ್ರಮ ಪುನರಾರಂಭಗೊಳ್ಳಲಿದೆ. ಪ್ರತಿ ಏಕಾದಶಿಗೆ 5 ಜಪಕೇಂದ್ರಗಳ ಮಠಾನುಯಾಯಿಗಳು ದಶಮಿ ದಿನದಂದು ಮಠಕ್ಕೆ ಆಗಮಿಸಿ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಹಾಗೂ ಏಕಾದಶಿಯಂದು ಭಜನೆ, ನಾಮಸ್ಮರಣೆ ನರವೇರಿಸಿ ಮನೆಗೆ ತೆರಳಬಹುದು. 550 ನೇಯ ವರ್ಧಂರತಿ ಉತ್ಸವದಲ್ಲಿ ದೇಶವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು ಎಂದು ಮರ್ತಗಾಳಿ ಮಠದ ಶ್ರೀಗಳು ನುಡಿದರು.

ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ನೇಯ ವರ್ಧಂತಿ ಉತ್ಸವವು ಭಾನುವಾರ ಭಕ್ತಿಪೂರ್ಣ ವಾತಾವರಣದಲ್ಲಿ ಸಮಾರೋಪಗೊಂಡಿದೆ. ಈ ಸಂದರ್ಭದಲ್ಲಿ ಪರ್ತಗಾಳಿ ಮಠದ ಕೇಂದ್ರ ಸಮೀತಿಯ ಅಧ್ಯಕ್ಷ ಶ್ರೀನಿವಾಸ್ ದೆಂಪೊ, ಉಪಾಧ್ಯಕ್ಷ ಶಿವಾನಂದ ಸಾಳಗಾಂವಕರ್, ಆರ್ ಆರ್ ಕಾಮತ್, ಅವಧೂತ ಕಾಮತ್, ರಾಜ್ಯ ಲೊಕೋಪಯೋಗಿ ಸಚಿವ ದಿಗಂಬರ್ ಕಾಮತ್, ಆದಿವಾಸಿ ಕಲ್ಯಾಣ ಸಚಿವ ರಮೇಶ್ ತವಡಕರ್, ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು, ವಿಶ್ವಹಿಂದೂ ಪರಿಷತ್ ನ ಗೋಪಾಲಜಿ, ಅಣ್ಣಪ್ಪ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಗೋವಾದ ಸುಪುತ್ರ ಹಾಗೂ ಕೇರಳದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಎಂದು ಭಾನುವಾರ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಪರ್ತಗಾಳಿ ಮಠ ಕೇಂದ್ರ ಸಮೀತಿಯ ಅಧ್ಯಕ್ಷ ಶ್ರೀನಿವಾಸ್ ದೆಂಪೊ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿ- ಗೋವಾ ಪರ್ತಗಾಳಿ ಮಠವು ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಮಠವು ಭವಿಷ್ಯದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ಕೇಂದ್ರವಾಗಲಿದೆ ಎಂದರು. ಮಠಕ್ಕೆ ಸೇವೆ ಸಲ್ಲಿಸಿದ ಹಾಗೂ ಮಠದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಪರ್ತಗಾಳಿ ಮಠದ ಶ್ರೀಗಳು ಶಾಲು ಹೊದಿಸಿ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.