ಸುದ್ಧಿಕನ್ನಡ ವಾರ್ತೆ
ಗ0ಗಾವತಿ: ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಹವ್ಯಾಸ ಬೆಳಸಿಕೊಂಡಿರುತ್ತಾರೆ. ಕಾಲ ಬದಲಾದಂತೆ ಜನರೂ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಅವರವರ ಹವ್ಯಾಸಗಳೂ ಬದಲಾಗುತ್ತಿವೆ. ಇಂದಿನ ಯುವ ಪೀಳಿಗೆ ಸಿನೆಮಾ, ಕ್ರಿಕೆಟ್ ತಾರೆಯರ ಭಾವಚಿತ್ರ ಸಂಗ್ರಹಿಸುವ ಹವ್ಯಾಸ ಇಟ್ಟುಕೊಳ್ಳುತ್ತಾರೆ ಹೊರತು, ಐತಿಹಾಸಿಕ ಚಿತ್ರಗಳನ್ನಲ್ಲ. ಅವುಗಳನ್ನು ಸಂಗ್ರಹಿಸುವ, ಜೋಪಾನವಾಗಿ ಎತ್ತಿಡುವ ಕೆಲಸ ಮಾಡುವ ಯುವಕರ ಸಂಖ್ಯೆ ಬೆರಳಣಿಕೆಯಷ್ಟು.
ಗಂಗಾವತಿ ತಾಲೂಕಿನ ರಾಂಪುರ ಗ್ರಾಮದ ಕ್ರೀಡಾಪಟು ಜಯಂತ್ ಕುಮಾರ್ ಶಾಲಾ ದಿನಗಳಲ್ಲಿ ರಾಷ್ಟ್ರಪೀತ ಮಹತ್ಮ ಗಾಂಧೀಜಿಯವರ ಭಾಷಣ ಪ್ರೇರಣೆಯಿಂದ ಪ್ರೇರೆಪಿತನಾಗಿ ಮಹಾತ್ಮ ಗಾಂಧೀಜಿಯವರ ಅಮೂಲ್ಯವಾದ ನಾಣ್ಯ, ನೋಟ್, ಸ್ಟಾಂಪ್ಗಳು ಹಾಗೂ ವಿಶೇಷವಾದ ಲೇಖನಗಳ ಸಂಗ್ರಹ ಅವರಲ್ಲಿ ಭದ್ರವಾಗಿ ಸಂರಕ್ಷಿಸಿ ಇಟ್ಟುರುವುದು ಇಂದಿನ ಪೀಳಿಗೆಗೆ ಒಂದು ಮಾದರಿಯೆ ಎಂದು ಹೇಳಬಹುದು.
ಅವರ ಸಂಗ್ರಹದ ಒಂದು ನೋಟ
ನಾಣ್ಯಗಳು: ಗಾಂಧೀಜಿ ಶತಮಾನೋತ್ಸವ ಅಂಗಾವಾಗಿ 1969ರಲ್ಲಿ ಆರ್.ಬಿ.ಐ ಬಿಡುಗಡೆ ಮಾಡಿರುವ ಅಪರೂಪದ 20 ಪೈಸೆ, 50 ಪೈಸೆ, 1 ರೂಪಾಯಿಯ, 10 ರೂಪಾಯಿ ಬೆಳ್ಳಿ ನಾಣ್ಯ, ಹಾಗೂ ಹಾಗೂ ಇತ್ತಿಚಿಗೆ ದಂಡಿ ಯಾತ್ರೆಯ 75 ವರ್ಷದ ನೆನಪಿನ ಅಂಗವಾಗಿ ಬಿಡುಗಡೆಯಾದ 5 ರೂಪಾಯಿಯ ನಾಣ್ಯ, 50 ವರ್ಷದ ಗಣರಾಜ್ಯೋತ್ಸವ ದಿನಾಚರಣೆಯಾಂಗವಾಗಿ ಬಿಡುಗಡೆಗೊಂಡ 50 ಪೈಸೆದ ನಾಣ್ಯಗಳ ಸಂಗ್ರಹ.
ನೋಟ್ಗಳು: ಅತ್ಯಂತ ಅಮೂಲ್ಯವಾದ ಗಾಂಧಿಜೀರವರ ಶತಮಾನೋತ್ಸವದಲ್ಲಿ ಬಿಡುಗಡೆಗೊಂಡ ಕುಳಿತು ಕೊಂಡು ಭಾಗವತಗೀತೆ ಓದುತ್ತಿರುವ ಗಾಂಧಿಯ 2, 5 , 10 ರೂಪಾಯಿ ಮತ್ತು ಒಂದು ರೂಪಾಯಿ ನೋಟ್ಗಳು. ಹಾಗೂ 1996ರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿರುವ 5, 10, 20, 50, 100, 500, 1000 ಮುಖ ಬೆಲೆಯ ರೂಪಾಯಿ ಚಿತ್ರಗಳು ಇರುವ ನೋಟ್ ಗುಚ್ಚಗಳ ಸಂಗ್ರಹ.
ಸ್ಟಾAಪ್ಗಳು: ಭಾತರ ಅಂಚೆ ಇಲಾಖೆ 2011ನಾಸಿಕ್ನಲ್ಲಿ ಮುದ್ರಿಸಿದ ಪ್ರಂಪಚದ ಮೊಟ್ಟ ಮೊದಲ 100 ರೂಪಾಯಿ ಮುಖ ಬೆಲೆಯ ಅಪರೂಪದ ಖಾದಿ ಗಾಂಧಿಜೀ ಸ್ಟಾಂಪ್. ಹಾಗೂ 25, 50, 100(ಕೆಂಪು, ಹಸಿರು ಬಣ್ಣದ)ಪೈಸೆಯ ಸ್ಟಾಂಪ್, 250, 500(ಕೆಂಪು, ನೀಲಿ ಬಣ್ಣದ), ಸತ್ಯಗ್ರಹ ನೆನಪಿನ ಅಂಗವಾಗಿ ಬಿಡುಗಡೆ ಗೊಂಡ 500 ಪೈಸೆ, 60 ವರ್ಷದ ಮಾನವ ಹಕ್ಕು ಅಯೋಗ ಅಧಿಕಾರಕ್ಕೆ ಬಂದ ನೆನಪಿನ ಅಂಗವಾಗಿ 500 ಪೈಸೆ ಒಳಗೊಂಡ ವಿವಿದ ರೀತಿಯ ಒಬ್ಬಂತು ಗಾಂಧೀಜಿ ಸ್ಟಾಂಪ್ಗಳು ಇವರು ಸಂಗ್ರದಲ್ಲಿವೆ.
ಲೇಖನ ಹಾಗೂ ವ್ಯಂಗಚಿತ್ರ: ಕೂತೂಲಹಕರವಾದ ಕನ್ನಡ, ತೆಲುಗು, ಇಂಗ್ಲೀಷ್ ಮೊದಲಾದ ದಿನ ಪತ್ರಿಕೆ, ಮ್ಯಾಗಜಿನ್ಗಳಲ್ಲಿ ಬಂದಿರುವ ಅಪೂರೂದ ಅಂಕಣ, ವ್ಯಂಗಚಿತ್ರ, ಛಾಯಾಚಿತ್ರ, ಲೇಖನಗಳದ ಗಾಂಧೀಗೂ ಒಬ್ಬ ಪ್ರೇಯಿಸಿ ಇದ್ದಳೂ!, ಪಂಚಕೋನ ಕ್ರಿಕೆಟ್ ನಿಲ್ಲಿಸಿದ ಗಾಂಧೀಜಿ, ಗಾಂಧೀಜಿ ಚಿತಿಗೆ ಅಗ್ನಿ ಸ್ಪರ್ಶ ಮಾಡಲು ಅವರ ಮಗ ನಿರಾಕರಿಸಿದ್ಧ!, ಗಾಂಧೀಜಿ ವಂಶ ವೃಕ್ಷ, ಹೆಂಗಿದ್ರು ಹೆಂಗಾದ್ರು ಗೊತ್ತಾ(ವ್ಯಂಗ ಚಿತ್ರ), ಗಾಂಧಿ ಹತ್ಯಗೆ ಐದು ಬಾರಿ ಯತ್ನ, ಗಾಂಧೀಜಿಯವರ ಹನ್ನೊಂದು ವ್ರತಗಳು, ಪತ್ರಕರ್ತರಾಗಿ ಗಾಂಧೀಜಿ, ’ಬೀದಿ ನಾಯಿಗಳನ್ನು ಕೊಲ್ಲಿ’ ಎಂದ್ದಿದರು ಗಾಂಧೀಜಿ. ಹಾಗೂ ವಿವಿದ ಲೇಖನಗಳ ಪರಿವಿಡಿಯನ್ನು ಪುಸ್ತಕದ ರೂಪದಲ್ಲಿ ಅಚ್ಚು ಕಟ್ಟಾಗಿ ಇಟ್ಟಿರುವುದು ನೋಡುಗರಿಗೆ ಕೂತುಹಲ ಮೂಡಿಸುತ್ತದೆ.
ಚಿಕ್ಕ ಹುಡುಗನಾಗಿದ್ದಾಗಲ್ಲೇ ಹವ್ಯಾಸವನ್ನು ರೂಢಿಸಿಕೊಂಡಿರುವುದರಿAದ ನನಲ್ಲಿ ಈಗ ದೊಡ್ಡ ಸಂಗ್ರಹವೇ ಇರುವುದರಿಂದ ಆಸಕ್ತರಿಗೆ ಇವುಗಳನ್ನು ತೋರಿಸಿ ಖುಷಿ ಪಡುತ್ತಾರೆ.
ಒಟ್ಟಾರೆ ಇತಿಹಾಸವನ್ನೇ ಮರೆಯುತ್ತಿರುವ ಕಾಲದಲ್ಲಿ ಗಾಂಧಿ ಜಯಂತಿ ದಿನದಂದರೂ ನಾವು ದಿನ ನಿತ್ಯ ಉಪಯೋಗಿಸುವ ರೂಪಾಯಿ ನೋಟ್ಗಳಲ್ಲದೆ ಅಪರೂಪದ ಸಂಗ್ರಹ ನೋಟ್, ನಾಣ್ಯ, ಸ್ಟಾಂಪ್, ಲೇಖನಗಳನ್ನು ನೋಡಿ ಬಾಪೂಜಿಯವರನ್ನು ಸ್ಮರಿಸೋಣ.