ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ದ ಬಾಮಣಗಿ ಗ್ರಾಮದ ರೈತ ಮಹಿಳೆಯ ಬತ್ತದ ಬಣಿವಿ ಬೆಂಕಿಯಲ್ಲಿ ಸುಟ್ಟು ಹೋಗಿ ಓಂದು ವರ್ಷ ವಾದರೂ ಬಡ ರೈತ ಮಹಿಳೆಗೆ ಒಂದೇ ಓಂದು ರೂಪಾಯಿ ಪರಿಹಾರ ವನ್ನೂ ತಾಲೂಕಾ ಆಡಳಿತ ನೀಡದಿರುವುದು ಎಂತ ವಿಪರ್ಯಾಸ ನೋಡಿ.

ಪ್ರಧಾನಿ ಗ್ರಾಮ ಪಂಚಾಯತದ ಬಾಮಣಗಿ ಯ ದೇವಕಿ ಕೋಂ ಪಾಂಡುರಂಗ ರಾಯಕರ ಇವಳ ಎರಡು ಎಕರೆ ಗದ್ದೆಯಲ್ಲಿ ಬೆಳೆದ ಸೋನಾ ಮಸೂರಿ ಬತ್ತದ ಬಣಿವೆ ಕಳೆದ ವರ್ಷ ಬತ್ತ ಒಕ್ಕುವ ಕೆಲ ದಿನಗಳ ಮೊದಲು ಬೆಂಕಿಗೆ ಆಹುತಿ ಯಾಯಿತು ಎರಡು ಎಕರೆ ಯಲ್ಲಿ ಬೆಳೆದ ಬತ್ತ ಉತ್ತಮ ಇಳುವರಿ ಪ್ರತಿವರ್ಷ ಕೊಡುತ್ತಿತ್ತು ಏನಿಲ್ಲ ಎಂದರೂ 30ರಿಂದ 40 ಕ್ತ್ವಿಂಟಲ್ ಬತ್ತ ಇತ್ತು, ಕನಿಷ್ಠ ಎಂದರೂ 50 ಸಾವಿರ ರೂಪಾಯಿ ಹಾನಿ ಯಾಗಿದೆ, ಗ್ರಾಮ ಪಂಚಾಯತ ಕಂದಾಯ ಇಲಾಖೆ ಎಲ್ಲರಿಗೂ ಮನವಿ ನೀಡಿ ಸಾಕಾಯ್ತು, ಯಾರಿಗೆ ಹೇಳಲಿ ನನ್ನ ಕಷ್ಟ ಯಾರೂ ನನ್ನ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ,

ಮಹಿಳೆ ಎಂದು ಆಡಳಿತ ದವರು ನನ್ನ ಮಾತಿಗೆ ಬೆಲೆ ಕೊಡ್ತಾ ಇಲ್ಲ, ಓಟು ಕೇಳುವವರು ಈಗ ಮಾತು ಆಡುತ್ತಿಲ್ಲ, ಪತ್ರಿಕೆ ಯವರೆಂದು ನಿಮ್ಮ ಬಳಿ ಬಂದಿದ್ದೇನೆ ದಯಮಾಡಿ ನನ್ನ ಕಷ್ಟ ಸರಕಾರಕ್ಕೆ ಹೇಳಿ, ಎಂದು ಬಾಮಣಗಿ ಯ ಮಹಿಳೆ ಅಲವತ್ತು ಕೊಂಡಿದ್ದಾಳೆ. ನನ್ನ ಬತ್ತದ ಬಣಿವೆ ಸುಟ್ಟಾಗ ಸ್ಥಳಕ್ಕೆ ಬಂದು ಫೋಟೋ ತೆಗೆದು ಕೊಂಡು ಹೋದ ದತ್ತ ಎಂಬ ಕಂದಾಯ ಇಲಾಖೆಯ ವ್ಯಕ್ತಿ ಮತ್ತೆ ಸಿಗಲೇ ಇಲ್ಲ ಎಂದು ದೇವಕಿ ರಾಯಕರ್ ಅಳುತ್ತ ಹೇಳುತ್ತಾಳೆ. ಕಳೆದ ಒಂದು ವರ್ಷ ದಿಂದ ನೂರಾರು ಬಾರಿ ಓಡಾಡಿ ಸಾಕಾಗಿದೆ ಎಂದು ಹೇಳುವ ದೇವಕಿಗೆ ಅನ್ಯಾಯ ವಾಗಿದೆಯೇ ಎಂದು ಮಾನ್ಯ ತಹಶೀಲ್ದಾರರು ಪರಿಶೀಲಿಸಿ ಅಗತ್ಯ ಕ್ರಮ ಕೈ ಕೊಂಡರೆ ವರ್ಷ ವಿಡೀ ದುಡಿದು ಹೈರಾಣಾಗುವ ರೈತ ಬಳಗಕ್ಕೆ ಸ್ವಲ್ಪ ನೆಮ್ಮದಿಯಾದೀತು ಎಂಬ ಮಾತು ಕೇಳಿಬಂದಿದೆ.