ಸುದ್ದಿ ಕನ್ನಡ ವಾರ್ತೆ
ಆನಂದಪುರ :- ಇಲ್ಲಿಗೆ ಸಮೀಪದ ಹೊಸಗುಂದ ಕ್ಷೇತ್ರದಲ್ಲಿರುವಂತಹ ಕಂಚಿ ಕಾಳಮ್ಮ ದೇವಾಲಯದಲ್ಲಿ ಶೃಂಗೇರಿ ಶ್ರೀಮಠದ ಶ್ರೀ ಭಾರತಿ ತೀರ್ಥ ಮಹಾ ಸ್ವಾಮೀಜಿಗಳವರು ಮತ್ತು ಕರಕಮಲ ಸಂಜಾತ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ಅ 3 ರಿಂದ 12ರ ವರೆಗೆ 9 ದಿನಗಳ ಕಾಲ ಕಂಚಿ ಕಾಳಮ್ಮ ದೇವಿಯ ಐದನೇ ವರ್ಷದ ನವರಾತ್ರಿ ಉತ್ಸವ ನಡೆಯಲಿದೆ.
ಪ್ರತಿ ದಿನ ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಕುಂಕುಮ ಅರ್ಚನೆ, ಉಡಿಸೇವೆ, ನಡೆಯಲಿದೆ. ಪ್ರತಿದಿನ ಸಂಜೆ ಕಂಚಿ ಕಾಳಮ್ಮ ದೇವಿಗೆ ಉಯ್ಯಾಲೆ ಸೇವೆ, ಅಷ್ಟವಧಾನ ಸೇವೆ, ಚಾಮರ ಸೇವೆ ಸೇರಿದಂತೆ ವಿವಿಧ ಸೇವೆಗಳು ನಡೆಯಲಿದೆ. ಅಕ್ಟೋಬರ್ 12ರ ಶನಿವಾರ ವಿಜಯದಶಮಿಯ ಅಂಗವಾಗಿ ಬೆಳಗ್ಗೆ ನವಚಂಡಿಕಾಯಾಗ, ಪೂರ್ಣಾವತಿ, ನಂತರ ದೇವಿಯ ಉತ್ಸವ ನಡೆಯಲಿದೆ ಎಂದು ಉಮಾಮಹೇಶ್ವರ ಸೇವಾ ಟ್ರಸ್ಟ್ ನ ಟ್ರಸ್ಟಿಗಳಾದ ಸಿ.ಎಮ್. ಎನ್. ಶಾಸ್ತ್ರಿ ತಿಳಿಸಿದ್ದಾರೆ.