ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ): ಗೋವಾದ ಕಾಣಕೋಣದ ಪರ್ತಗಾಳಿ ಮಠದಲ್ಲಿ ನವೆಂಬರ್ 27 ರಿಂದ ನಡೆಯುತ್ತಿರುವ 550 ನೇಯ ವರ್ಧಂತಿ ಉತ್ಸವದ ಅಂಗವಾಗಿ ಪ್ರತಿದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಮ್ಮ ದೇಶದ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೆಯೇ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.

ಪರ್ತಗಾಳಿ ಮಠದ ಸುತ್ತಮುತ್ತಲೂ ಈ ವಿಶೇಷ ಉತ್ಸವದ ಹಿನ್ನೆಲೆಯಲ್ಲಿ ವಿದ್ಯುದಲಂಕೃತಗೊಳಿಸಲಾಗಿದೆ. ಸಂಜೆಯ ವೇಳೆಯ ಲೈಟಿಂಗ್ ನಿಂದಾಗಿ ಪರ್ತಗಾಳಿ ಮಠದ ಪರಿಸರ ಇನ್ನಷ್ಟು ಸುಂದರವಾಗಿ ಕಂಗೊಳ್ಳಿಸುತ್ತಿದೆ.
ಪ್ರತಿದಿನ ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ 10 ಸಾವಿರಕ್ಕೂ ಮಿಕ್ಕಿದೆ. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರೂ ಕೂಡ ಮಠವು ಸ್ವಚ್ಛತೆಯನ್ನು ಅದೇ ರೀತಿ ಕಾಯ್ದುಕೊಂಡು ಹೋಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಸ್ವಯಂಸೇವಕರು ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದಾಗಿ ಎಲ್ಲಿಯೂ ಅವ್ಯವಸ್ಥೆ ಎಂಬ ಮಾತೇ ಬಂದಿಲ್ಲ. ಮಠಕ್ಕೆ ಆಗಮಿಸುದ ಭಕ್ತರೆಲ್ಲರೂ ಧನ್ಯತಾಭಾವದಿಂದ ಹಿಂದಿರುಗುತ್ತಿದ್ದಾರೆ.
