ಸುದ್ಧಿಕನ್ನಡ ವಾರ್ತೆ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಸೇತುವೆ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಡಿ.ಪಿ.ಆರ್ ಸಿದ್ಧಪಡಿಸುತ್ತಿರುವ ಗುತ್ತಿಗೆ ಸಂಸ್ಥೆಯ ತಾಂತ್ರಿಕ ತಂಡದೊಂದಿಗೆ ಶಾಸಕ ಶಿವರಾಮ ಹೆಬ್ಬಾರ್ ರವರ ನೇತೃತ್ವದಲ್ಲಿ ಸಭೆ ನಡೆಯಿತು.
ಸೇತುವೆ ನಿರ್ಮಾಣ ಪ್ರಕ್ರಿಯೆಗೆ ಸಂಬಂಧಿಸಿದ ತಾಂತ್ರಿಕ ಅಂಶಗಳು, ವಿನ್ಯಾಸ, ವೆಚ್ಚ ಹಾಗೂ ಕಾರ್ಯಗತಿಯ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದು ಯೋಜನೆಯನ್ನು ವೇಗವಾಗಿ ಹಾಗೂ ಗುಣಮಟ್ಟದೊಂದಿಗೆ ಮುನ್ನಡೆಸುವಂತೆ ಶಾಸಕ ಶಿವರಾಮ ಹೆಬ್ಬಾರ್ ಅಗತ್ಯ ಸಲಹೆಗಳನ್ನು ನೀಡಿದರು.
ಗುಳ್ಳಾಪುರ ಸೇತುವೆಯು ಹಲವು ಊರುಗಳನ್ನು ಸಂಪರ್ಕಿಸುವ ಮುಖ್ಯ ಸೇತುವೆಯಾಗಿದೆ. ಈ ಸೇತುವೆ ಭಾರಿ ಮಳೆಗೆ ಕೊಚ್ಚಿಹೋಗಿ ಹಲವು ವರ್ಷಗಳೇ ಗತಿಸಿದೆ. ಇದೀಗ ಈ ಸೇತುವೆ ನಿರ್ಮಾಣಕ್ಕೆ ಅಗತ್ಯ ಪ್ರಯತ್ನ ನಡೆದಿರುವುದಕ್ಕೆ ಶೇವಕಾರ್, ಹೆಗ್ಗಾರ್,ಕಲ್ಲೇಶ್ವರ, ವೈದ್ಯಹೆಗ್ಗಾರ್ ಭಾಗದ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲಿದೇಯೇ ಶೀಘ್ರವಾಗಿ ಈ ಸೇತುವೆ ನಿರ್ಮಾಣಗೊಳ್ಳುವಂತಾಗಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
