ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಸಾಹಿತ್ಯ ರತ್ನ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸೀತಾ ದಾನಗೇರಿ ಕವಿಯತ್ರಿ ಸೀತಾ ಸುಬ್ರಾಯ ದಾನಗೇರಿ

ಅವರಿಗೆ ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ವೇದಿಕೆ ಇವರು ಕಳೆದ ರವಿವಾರ ಸಾಹಿತ್ಯ ರತ್ನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದು ತಾಲೂಕಿನ ಸಾಹಿತ್ಯ ಕ್ಕೆ ಮೆರಗು ನೀಡಿದೆ.

ತಾಲೂಕಿನಲ್ಲಿ ಸಾಹಿತ್ಯ ಕೃಷಿ ಮಾಡುತ್ತಾ ಸಾಹಿತ್ಯ ಕ್ಷೆತ್ರಕ್ಕೆ ಆರು ಕೃತಿ ಗಳನ್ನು ಸೀತಾ ದಾನಗೇರಿ ನೀಡಿರುತ್ತಾರೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ಮುಂದುವರಿಯುತ್ತಾ ಇನ್ನಷ್ಟು ಹೊಸತನ ತರಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನ ನಯನ ಸಭಾಂಗಣ ದಲ್ಲಿ ಖ್ಯಾತ ಕಾದಂಬರಿಕಾರ ಕೌ0ಡಿನ್ಯ ಕಾರ್ಯಕ್ರಮ ಉದ್ಘಾಟನೆ ಮಾಡಿದರು ವಿವಿಧ ಕಲಾವಿದರು ಗಣ್ಯರು ಉಪಸ್ಥಿತರಿದ್ದರು. ಪ್ರಮುಖ ವಾಗಿ ಓಂ ಸಾಯಿಪ್ರಕಾಶ್, ಎಲ್ ನಾಗರಾಜಾಚಾರ, ನಟಿ ಅಕ್ಷತಾ, ಡಾ, ಎಸ್ ಸಿ ಅಶ್ವತ ನಾರಾಯಣ್, ರಾಜಕೀರಣ್, ಸೇರಿದಂತೆ ಹಲವರು ಪ್ರಶಸ್ತಿ ವಿಜೇತರ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿ ಹಾರೈಸಿದರು