ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದ ಸಪ್ತ ಸ್ವರ ಸೇವಾ ಸಂಸ್ಥೆಯ ವತಿಯಿಂದ ನಡೆದ ರಾಜ್ಯ ಮಟ್ಟದ ಭಾವಸಂಗಮ ಆನ್ ಲೈನ್ ಭಾವಗೀತೆ ಸ್ಪರ್ಧೆಯಲ್ಲಿ ವಿಜೇತ ರಂಜನ ಹುಲ್ಸೆ ಅವರಿಗೆ ಸಪ್ತಸ್ವರ ಸೇವಾ ಸಂಸ್ಥೆಯ ವತಿಯಿಂದ ಅವರ ಸ್ವಗೃಹದಲ್ಲಿ ಸ್ಮರಣಿಕೆ,ಪ್ರಶಸ್ತಿ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಪ್ತಸ್ವರ ಸೇವಾ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸುಮಂಗಲಾ ದೇಸಾಯಿ,ಸಂಧ್ಯಾ ದೇಸಾಯಿ,ಭಾರತಿ ಭಟ್ಟ,ಭಾರತಿ ಹೆಗಡೆ ಇದ್ದರು.ಗೌರಿ ಸಿದ್ದಿ,ಲಲಿತಾ ಸಿದ್ದಿ,ನಯನ ಹೆಗಡೆ ಇನ್ನುಳಿದ ವಿಜೇತ ಸ್ಪರ್ಧಿಗಳಾಗಿದ್ದಾರೆ ಎಂದು ಸಂಘಟಕರು ತಿಳಿಸಿರುತ್ತಾರೆ.
