ಸುದ್ಧಿಕನ್ನಡ ವಾರ್ತೆ
Goa: ಗೋವಾದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹರಮಲ್ ಬೀಚ್ ನಲ್ಲಿ (Haramal Beach) ಸದ್ಯ ಚಿಂತಾಜನಕ ಹಾಗೂ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಪ್ರವಾಸಿ ತಾಣದಲ್ಲಿ ಸುಮಾರು 8 ರಿಂದ 10 ವರ್ಷ ಅಪ್ರಾಪ್ತ ರಷ್ಯನ್ ಬಾಲಕಿ( Russian Girl) ಹೂವು ಮಾರಾಟ ಮಾಡಲು ಪ್ರವಾಸಿಗರೊಂದಿಗೆ ಪೋಟೊ ಕ್ಲಿಕ್ಕಿಸಿಕೊಳ್ಳುವ ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಬೇಸರವನ್ನು ಮೂಡಿಸಿದೆ.
ಈ ರಷ್ಯನ್ ಬಾಲಕಿಯು ಕೇವಲ ಹೂವು ಮಾರಾಟ (Flower sale)ಮಾಡುವುದಷ್ಟೇ ಅಲ್ಲ, ತನ್ನೊಂದಿಗೆ ಪೊಟೊ ತೆಗೆಸಿಕೊಳ್ಳುವಂತೆ ಪ್ರವಾಸಿಗರಿಗೆ ಒತ್ತಾಯಿಸುತ್ತಿದ್ದಾಳೆ. ಇದಕ್ಕಿಂತ ಆತಂಕಕಾರಿ ವಿಷಯವೆಂದರೆ ಈ ಬಾಲಕಿಯ ಬಳಿ ಆನ್ ಲೈನ್ ಪೇಮೆಂಟ್ ಮಾಡಿಸಿಕೊಳ್ಳಲು ಕ್ಯುಆರ್ ಕೋಡ್ QR code ನೀಡಲಾಗಿದೆ. ಇದರಿಂದಾಗಿ ಪ್ರವಾಸಿಗರು ತ್ವರಿತವಾಗಿ ಹಾಗೂ ನೇರವಾಗಿ ಬ್ಯಾಂಕ್ ಖಾತೆಗೆ ( Bank Account) ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗುತ್ತಿದೆ. ಈ ಎಲ್ಲ ಘಟನೆಗಳನ್ನು ಗಮನಿಸಿದರೆ ಈ ಬಾಲಕಿಯು ತನ್ನದೇ ಸ್ವಂತ ಬುದ್ಧಿಯಿಂದ ಈ ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಈ ಬಾಲಕಿಯ ಇಂತಹ ಕೆಲಸದ ಹಿಂದೆ ಯಾವುದೋ ಸಂಘಟನೆಯ ಶೋಷಣೆ ಅಥವಾ ಯಾವುದೋ ಗುಂಪು ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಸ್ಥಳೀಯರು ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇಷ್ಟು ಸಣ್ಣ ವಯಸ್ಸಿನ ವಿದೇಶಿ ಬಾಲಕಿ ಬೀದಿಗೆ ತಂದು ಕೆಲಸ ಮಾಡಿಸಿಕೊಳ್ಳುವುದು , ಪ್ರವಾಸಿಗರೊಂದಿಗೆ ಈ ರೀತಿ ಪೊಟೊ ತೆಗೆಸಿಕೊಳ್ಳು ಒತ್ತಾಯಿಸುವುದು ಇದು ಆಕೆಯ ಸುರಕ್ಷತಾ ದೃಷ್ಠಿಯಿಂದಲೂ ಆತಂಕ ಮೂಡಿಸುವಂತದ್ದಾಗಿದೆ. ಈ ಬಾಲಕಿಯು ಯಾರದ್ದೋ ಒತ್ತಡಕ್ಕೆ ಅಥವಾ ಶೋಷಣೆಗೆ Exploitation ಒಳಗಾಗಿದ್ದಾಳೆಯೇ..? ಎಂಬ ಭೀತಿ ಕೂಡ ಎದುರಾಗಿದೆ.
ಈ ಸಂಪೂರ್ಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಗೋವಾ ಸರ್ಕಾರ (Goa Government) ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ವಿದೇಶಿ ಬಾಲಕಿಯನ್ನು ಬೀಚ್ ನಲ್ಲಿ ಹೂವು ಮಾರಲು ಕಳುಹಿಸುತ್ತಿರುವವರ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳಬೇಕು. ಈಕೆಯ ಬಳಿ ಕ್ಯುಆರ್ ಕೋಡ್ ನೀಡಿರುವ ಸೂತ್ರಧಾರನನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಘ್ರಹಿಸಿದ್ದಾರೆ. ಗೋವಾದ ಹೆಸರು ಇಲ್ಲಿನ ಪ್ರವಾಸಿ ತಾಣಗಳ ಮೂಲಕ ಜಗತ್ಪ್ರಸಿದ್ಧಿ ಪಡೆದಿದ್ದು ಇಂತಹ ಕೃತ್ಯಗಳಿಂದ ಗೋವಾದ ಹೆಸರು ಹಾಳಾಗಲಿದೆ ಎಂದು ಕೂಡ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
