ಸುದ್ಧಿಕನ್ನಡ ವಾರ್ತೆ
Goa: ಪ್ರತಿ ವರ್ಷದಂತೆ ಪ್ರಸಕ್ತ ವರ್ಷ ಹೊಸ ವರ್ಷದ ಸಂಭ್ರಮಾಚರಣೆಯ (New Year) ಸಂದರ್ಭದಲ್ಲಿ ಸನ್‍ಬರ್ನ್ ಮಹೋತ್ಸವ (Sun Burn Festival)ಎಲ್ಲಿ ಆಯೋಜಿಸಬೇಕು ಎಂದು ಸಂಘಟಕರು ಗೊಂದಲಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷದಂತೆಯೇ ಪ್ರಸಕ್ತ ವರ್ಷವೂ ಕೂಡ ಗೋವಾದಲ್ಲಿ ಸನ್ ಬರ್ನ ಮಹೋತ್ಸವಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ಕೆಲ ವರ್ಷಗಳ ಹಿಂದೆ ಇದೇ ಮಹೋತ್ಸವದಲ್ಲಿ ಮಾದಕ ದೃವ್ಯ ಸೇವನೆಯಿಂದ ಕೆಲವು ಪ್ರವಾಸಿಗರು ಸಾವನ್ನಪ್ಪಿದ ಘಟನೆಯೂ ನಡೆದಿತ್ತು. ಇದರಿಂದಾಗಿ ಗೋವಾದಲ್ಲಿ ಸನ್ ಬರ್ನ ಆಯೋಜನೆಗೆ ಹೆಚ್ಚಿನ ವಿರೋಧ ವ್ಯಕ್ತವಾಗುತ್ತಿದೆ.

ಸನ್ ಬರ್ನ ಮಹೋತ್ಸವದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಕಲಾವಿದರು ಪಾಲ್ಗೊಳ್ಳುತ್ತಾರೆ. ಈ ಮಹೋತ್ಸವ ಹೊಸ ವರ್ಷದ ಸಂಭ್ರಮಾಚರಣೆ (New Year Celebrashion)ಸಂದರ್ಭದಲ್ಲಿ ನಡೆಯುವುದರಿಂದ ಭಾರಿ ಜನದಟ್ಟಣೆ ಕೂಡ ಸಂಭವಿಸುತ್ತದೆ. ಈ ಮಹೋತ್ಸವದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾದಕ ದೃವ್ಯ ಬಳಕೆಯಾಗುತ್ತದೆ ಎಂಬುದು ಈ ಮಹೋತ್ಸವ ವಿರೋಧಿಸಲು ಪ್ರಮುಖ ಕಾರಣ ಎನ್ನಲಾಗುತ್ತಿದೆ,.

ಕಳೆದ ಎರಡು ವಾರಗಳ ಹಿಂದೆಯಷ್ಟೇ ರಾಜ್ಯ ಪಂಚಾಯತ್ ಸಚಿವ ಮಾವಿನ್ ಗುದಿಮ್ಹೊ, ಶಾಸಕ ಅಂತೋನಿ ವಾಜ್ ಮತ್ತು ರೆಜಿನಾಲ್ಡ್ ರವರು ಮುಖ್ಯಮಂತ್ರಿ ಪ್ರಮೋದ ಸಾವಂತ್ (Goa C.m Pramod Savant) ರವರನ್ನು ಭೇಟಿಯಾಗಿ ಸನ್ ಬರ್ನ್ ಗೆ ದಕ್ಷಿಣ ಗೋವಾ ದಲ್ಲಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು. ಇದೇ ವೇಳೆ ಮುಖ್ಯಮಂತ್ರಿಗಳು ಕೂಡ ಈ ಬೇಡಿಕೆಯನ್ನು ಒಪ್ಪಿಕೊಂಡಿದ್ದು, ದಕ್ಷಿಣ ಗೋವಾದಲ್ಲಿ ಸನ್ ಬರ್ನ ಮಹೋತ್ಸವ ಆಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಬಾರದೇಸ್ ತಾಲೂಕಿನ ಕಾಮುರ್ಲಿ ಗ್ರಾಮದಲ್ಲಿ ಈ ವರ್ಷದ ಸನ್ ಬರ್ನ ಮಹೋತ್ಸವದ (Sun Burn Festival) ಬಗ್ಗೆ ಚರ್ಚೆ ನಡೆಯಿತು. ಅಷ್ಟರಲ್ಲಿ ಗ್ರಾಮಸ್ಥರೂ ಆಕ್ರೊಶಗೊಂಡು ಸನ್ ಬರ್ನ ಮಹೋತ್ಸವ ಆಯೋಜನೆಯ ಸಾಧ್ಯತೆಯೂ ಮಾಯವಾಯಿತು. ಆದರೆ ಕಲಂಗುಟ್ ಶಾಸಕ ಮೈಕಲ್ ಲೋಬೋ ಅವರು ಈ ಬಾರಿಯ ಸನ್ ಬರ್ನ ಮಹೋತ್ಸವವನ್ನು ಕಲಂಗುಟ್‍ನಲ್ಲಿ ಆಯೋಜಿಸಲು ಯಾವುದೇ ತೊಂದರೆ ಇಲ್ಲ ಎಂದು ಹೇಳಿಕೆ ನೀಡಿರುವುದು ಗೋವಾ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.

ಗೋವಾದಲ್ಲಿ ನಮ್ಮ ಕ್ಷೇತ್ರ ಬಿಟ್ಟರೆ ಬೇರೆ ಯಾರೂ ಸನ್ ಬರ್ನ್ ಗೆ ಜಾಗ ಕೊಡಲು ಕೊಡಲು ಸಿದ್ಧರಿಲ್ಲ. ಈ ಹಿಂದೆ ಕಾಂದೋಲಿಯಲ್ಲಿ ಸನ್ ಬರ್ನ್ ನಡೆದಿದ್ದು, ನಂತರ ವಾಗತೋರ್ ನಲ್ಲೂ ನಡೆದಿತ್ತು. ಈ ಎರಡೂ ಸ್ಥಳಗಳು ಚೆನ್ನಾಗಿವೆ. ಈಗ ದಕ್ಷಿಣ ಗೋವಾದ ಜನರು ತಮ್ಮ ಹಳ್ಳಿಯಲ್ಲಿ ಸನ್ ಬರ್ನ ಮಹೋತ್ಸವ ಆಯೋಜಿಸಲು ನಿರಾಕರಿಸುತ್ತಿದ್ದಾರೆ. ಇನ್ನೂ ಅಲ್ಲಿ ಈ ಮಹೋತ್ಸವ ಆಯೋಜಿಸಿದರೆ ಸಾವಿರಾರು ಜನ ಬೀದಿಗೆ ಇಳಿದು ಹೋರಾಟ ನಡೆಸುತ್ತಾರೆ, ಇದು ರಾಜ್ಯಕ್ಕೆ ನಾಚಿಕೆ ಸಂಗತಿ. ಗೋವಾದ ಇತರ ಗ್ರಾಮಗಳು ಸನ್ ಬರ್ನ ಆಯೋಜಿಸಲು ಸಿದ್ಧತೆಯನ್ನು ತೋರಿದರೆ, ಅವರನ್ನೂ ಬೆಂಬಲಿಸುತ್ತೇವೆ ಎಂದು ಶಾಸಕ ಮೈಕೆಲ್ ಲೋಬೊ ಹೇಳಿದರು.

ಸನ್ ಬರ್ನ್ (Sun Burn) ಯಾವಾಗಲೂ ವಿವಾದದ ಕೇಂದ್ರವಾಗಿದೆ. ಇಲ್ಲಿ ಡ್ರಗ್ಸ್ ಬಳಕೆ ಜಾಸ್ತಿ. ಮಿತಿಮೀರಿದ ಸೇವನೆಯಿಂದ ಅನೇಕ ಪ್ರವಾಸಿಗರು ಸಾವನ್ನಪ್ಪಿದ ಘಟನೆಗಳೂ ಬೆಳಕಿಗೆ ಬಂದಿವೆ. ನಾಡಿನ ಯುವಕರನ್ನು ವಾಮಮಾರ್ಗಕ್ಕೆ ಕೊಂಡೊಯ್ಯುತ್ತಿರುವ ಈ ಸನ್ ಬರ್ನ ಮಹೋತ್ಸವಕ್ಕೆ ಅವಕಾಶ ನೀಡಬಾರದು ಎಂದು ದಕ್ಷಿಣ ಗೋವಾದ ಹಲವು ಗ್ರಾಮಸಭೆಗಳಲ್ಲಿ ಇದರ ವಿರುದ್ಧ ನಿರ್ಣಯ ಅಂಗೀಕರಿಸಿ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ.
ಪರ್ವರಿಯಲ್ಲಿರುವ ಸಚಿವಾಲಯದಲ್ಲಿ ನಡೆದ ಸಭೆಯ ನಂತರ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಮಾತನಾಡಿ- ಸನ್ ಬರ್ನ ಮಹೋತ್ಸವ ಸಂಘಟಕರು ಆಯೋಜನೆ ಸ್ಥಳವನ್ನು ನಿಗಧಿ ಪಡಿಸಿ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಿದರೆ, ಖಂಡಿತವಾಗಿಯೂ ಗೋವಾದಲ್ಲಿ ಸನ್‍ಬರ್ನ್ ಮಹೋತ್ಸವ ಆಯೋಜನೆಗೆ ಅವಕಾಶ ನೀ