ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ): ನಾವು ಗೌಡಸಾರಸ್ವತ ಸಮಾಜ ಬಾಂಧವರಿಗೆ ಒಂದು ಸಪ್ರೈಜ್ ಗಿಫ್ಟ ಕೊಡಬೇಕು ಎಂದು ಮನಸ್ಸಿನಲ್ಲಿ ಸಂಕಲ್ಪಿಸಿದ್ದೆವು, ಅದು ಪರಿಪೂರ್ಣವಾಗಿದೆ. ಇದರ ಸಂಪೂರ್ಣ ಶ್ರೇಯ ಜಿಎಸ್ ಬಿ ಸಮಾಜ ಬಾಂಧವರಿಗೆ ಲಭಿಸುತ್ತದೆ. ನಮ್ಮ ಹೆಸರನ್ನು ವರ್ಡಬುಕ್ ಆಫ್ ರೆಕಾರ್ಡ, ಇಂಡಿಯನ್ ಬುಕ್ ಆಪ್ ರೆಕಾಡ್ರ್ಸ,ಏಷ್ಯನ್ ಬುಕ್ ಆಪ್ ರೆಕಾಡ್ರ್ಸ ನಲ್ಲಿ ಹಾಕಬೇಕೆಂದಿದ್ದರು, ನಮ್ಮ ಹೆಸರು ಹಾಕಿದರೆ ನಾವು ಸ್ವೀಕಾರ ಮಾಡುವುದಿಲ್ಲ. ಜಪ ಮಾಡಿದರವು ಸಮಾಜ ಬಾಂಧವರು. ಜಪ ಮಾಡಿದವರು ಜಾಪಕರು, ನಾವು ಕೇವಲ ಮಾರ್ಗದರ್ಶನ ಮಾಡಿದ್ದೆವು. ನಮ್ಮ ಹೆಸರು ಬೇಡ ನಮ್ಮ ಜಿಎಸ್ ಬಿ ಸಮಾಜ ಬಾಂಧವರು ಎಂದು ಹಾಕಿ ಎಂದು ನಾವು ಹೇಳಿದೆವು. ಇದೀಗ ಈ ಜಪ ಅಭಿಯಾನ ವರ್ಡ ಬುಕ್ ಆಪ್ ರೆಕಾರ್ಡ ನಲ್ಲಿ ಶ್ರೀರಾಮನಾಮ ಜಪ ಸಾಧನೆ ದಾಖಲಾಗಿದೆ ಇದು ಸಂತಸದ ಸಂಗತಿ. ಶ್ರೀರಾಮ ನಾಮ ಜಪದಿಂದ ಇದಕ್ಕಿಂತ ಮಿಗಿಲಾಗಿ ನಿಮ್ಮೆಲ್ಲರ ಹೆಸರು ವೈಕುಂಠ ಬುಕ್ ಆಫ್ ರೆಕಾರ್ಡನಲ್ಲಿ ಜಮಾ ಆಗಿದೆ, ಇದು ದೇವರ ಚರಣಕ್ಕೆ ತಲುಪಿದೆ ಎಂದು ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ನುಡಿದರು.
550 ನೇಯ ವರ್ಷದ ವರ್ಧಂತಿ ಉತ್ಸವದ ಅಂಗವಾಗಿ ಭಾನುವಾರ ಸಂಜೆ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. 77 ಅಡಿ ಎತ್ತರದ ಕಂಚಿನ ಶ್ರೀರಾಮನ ಮೂರ್ತಿಯ ಕೆಳಭಾಗದಲ್ಲಿ ಶ್ರೀರಾಮ ಜಪಕೇಂದ್ರಗಳ ಹೆಸರು ಹಾಕಬೇಕು ಎಂದು ನಮ್ಮ ಮನಸ್ಸಿನಲ್ಲಿ ಸಂಕಲ್ಪವಿತ್ತು. ಅದು ನೆರವೇರಿದೆ. ಇಷ್ಟೊಂದು ದೊಡ್ಡ ಕಾರ್ಯಕ್ರಮಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಯಿಸಬೇಕು ಎಂದು ಮಠದ ಅಧ್ಯಕ್ಷರಾದ ಶ್ರೀನಿವಾಸ್ ದೆಂಪೊ ಹೇಳಿದ್ದರು. ಆದರೆ ನೀವೇ ಅದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ನಾವು ಅವರಿಗೆ ಸೂಚಿಸಿದ್ದೆವು. ಪ್ರಧಾನಿಗಳ ಕಾರ್ಯಕ್ರಮ ಕೂಡ ಯಶಸ್ವಿಯಾಗಿ ಪೂರ್ಣಗೊಂಡಿದೆ. ಜಪಕೇಂದ್ರಗಳ ಹೆಸರನ್ನು ಪ್ರಧಾನಿಗಳೇ ಅನಾವರಣಗೊಳಿಸಿದ್ದಾರೆ ಎಂದು ಶ್ರೀಗಳು ನುಡಿದರು.
ಪರ್ತಗಾಳಿ ಮಠದ ವಿವಿಧ ವಾಸ್ತು ನಿರ್ಮಾಣಕ್ಕೆ ಹಲವು ದಾನಿಗಳ ಸಹಾಯ ಸಹಕಾರದಿಂದ ಇವೆಲ್ಲ ಸಾಕಾರಗೊಂಡಿದೆ. ಕಳೆದ ಅನೇಕ ದಿನಗಳಿಂದ ಇಲ್ಲಿ ಕರಸೇವರು,ಸ್ವಯಂ ಸೇವಕರು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಇವರಿಗೆಲ್ಲ ಆಶೀರ್ವಾದ ನೀಡಿದ್ದೇವೆ. ಇಷ್ಟೊಂದು ದೊಡ್ಡ ಪ್ರಮಾಣದ ವಾಸ್ತು ನಿರ್ಮಾಣ ಹಾಗೂ ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಜಿಎಸ್ ಬಿ ಸಮಾಜ ಬಾಂಧವರೆಲ್ಲೂ ಸಹಾಯ ಸಹಕಾರ ನೀಡಿದ್ದರಿಂದ ಇವೆಲ್ಲ ಸಾಧ್ಯವಾಗಿದೆ. ಎಲ್ಲ ಭಕ್ತಗಿಗೂ ಉದ್ಯೋಗ,ವ್ಯವಹಾರದಲ್ಲಿ ಯಶಸ್ಸು, ಕೀರ್ತಿ ಲಭಿಸಲಿ ಎಂದು ದೇವರಲ್ಲಿ ಪ್ರರ್ಥಿಸುತ್ತೇವೆ. ಇನ್ನೂ 7 ದಿನದ ಕಾರ್ಯಕ್ರಮ ಬಾಕಿ ಇದೆ. ಇಷ್ಟೇ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗಬಾರದು. ಮುಂದಿನ ದಿನದ ಎಲ್ಲ ಕಾರ್ಯಕ್ರಮಗಳಿಗೆ ಇದೇ ರೀತಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಾಯ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಗಳು ನುಡಿದರು.
