ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಾಣಕೋಣದಲ್ಲಿ ನಡೆಯುತ್ತಿರುವ 550 ನೇಯ ವರ್ಷದ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಭಕ್ತ ಜನಸಾಗರವೇ ಹರಿದುಬರುತ್ತಿದೆ. ಭಾನುವಾರವಂತೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಸಾಗರ ಹರಿದು ಬಂದಿತ್ತು.
ಊಟದ ಛತ್ರದಲ್ಲಿ 1450 ಜನ ಕುಳಿತು ಊಟ ಮಾಡಲು ವ್ಯವಸ್ಥೆ, 1000 ಬಫೆ, 500 ಜನ ಹಿರೀಯ ನಾಗರೀಕರಿಗೆ ಪ್ರತ್ಯೇಕ ವ್ಯವಸ್ಥಯಿದೆ. ಈ ಮೂರು ಸ್ಥಳದಲ್ಲಿ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಪ್ರತಿದಿನ ಹರಿದುಬರುತ್ತಿರುವ ಭಾರಿ ಭಕ್ತ ಸಾಗರಕ್ಕೆ ಊಟೋಪಚಾರದ ವ್ಯವಸ್ಥೆ ಯಾವುದೇ ಗದ್ಧಲ ಗೊಂದಲ ಇಲ್ಲದೆಯೇ ನೆರವೇರುತ್ತಿದೆ.

ಮಠದ 550 ನೇಯ ವರ್ಧಂತಿ ಉತ್ಸವದ ಅಂಗವಾಗಿ ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ ಕರ್ನಾಟಕ,ಗೋವಾ, ಮಹಾರಾಷ್ಟø ಸೇರಿದಂತೆ ದೇಶ-ವಿದೇಶಗಳಿಂದ ಭಕ್ತ ಸಾಗರವೇ ಹರಿದುಬರುತ್ತಿದೆ. ಸಾಗರೋಪಾದಿಯಲ್ಲಿ ಹರಿದುಬರುತ್ತಿರುವ ಭಕ್ತರಿಗೆ ಬೆಳಿಗ್ಗೆ ಉಪಹಾರ, ಮಧ್ಯಾನ್ಹ ಹಾಗೂ ಸಂಜೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಇಷ್ಟೊಂದು ಜನ ಭಕ್ತಿಗೆ ವ್ಯವಸ್ಥಿತವಾಗಿ ಊಟೋಪಚಾರ ವ್ಯವಸ್ಥೆ ಕಲ್ಪಿಸಲು ನೂರಾರು ಜನ ಸ್ವಯಂ ಸೇವಕರು ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ಗೋವಾದಿಂದಲೂ ಭಕ್ತಾದಿಗಳು ಆಗಮಿಸಿದ್ದಾರೆ.

ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಪ್ರತಿದಿನ ಭಕ್ತರು ಆಗಮಿಸುತ್ತಿದ್ದರೂ ಕೂಡ ಯಾವುದೇ ತೊಂದರೆ ಇಲ್ಲದೆಯೇ ವ್ಯವಸ್ಥಿತ ರೀತಿಯಲ್ಲಿ ಎಲ್ಲರಿಗೂ ವಸತಿ,ಊಟೋಪಚಾರ ವ್ಯವಸ್ಥೆಯನ್ನು ಪರ್ತಗಾಳಿ ಮಠ ನೆರವೇರಿಸುತ್ತಿದೆ. ಪ್ರತಿದಿನ ಸುಮಾರು 10,000 ಭಕ್ತರು ಆಗಮಿಸುವ ನಿರೀಕ್ಷೆ ಹೊಂದಿದ್ದರೂ ಕೂಡ ಸದ್ಯ ದುಪ್ಪಟ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರೂ ಕೂಡ ಎಲ್ಲ ವ್ಯವಸ್ಥೆಗಳೂ ಸುವ್ಯವಸ್ಥಿತವಾಗಿ ನೆರವೇರುತ್ತಿದೆ.
ಇನ್ನೂ 7 ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು , ಮುಂಬರುವ ದಿನಗಳಲ್ಲಿ ಮಠಕ್ಕೆ ಆಗಮುಸುವ ಭಕ್ತರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
