ಸುದ್ಧಿಕನ್ನಡ ವಾರ್ತೆ

BIG BOSS: ಬಿಗ್ ಬಾಸ್ ಮನೆಯಲ್ಲಿ  ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ರವರ ಹವಾ ಜೋರಾಗಿದ್ದು ಈ ಬಾರಿ ರಕ್ಷಿತಾ ಶೆಟ್ಟಿ ರವರೇ ಬಿಗ್ ಬಾಸ್ ಗೆದ್ದು ಕೀರ್ತಿ ತರುತ್ತಾರೆ ಅಂತ ಅವರ ಅಭಿಮಾನಿಗಳು ದಾರಿ ಕಾಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಗಿಲ್ಲಿ ಹಾಗೂ ರಕ್ಷಿತಾ ಶೆಟ್ಟಿ ರವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳ ಬೆಂಬಲವಿದೆ.

           ಕಿಚ್ಚ ಸುದೀಪ್ ರವರು ನಿರೂಪಣೆ ಮಾಡುವ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ಅಂತಿಮ ಹಂತಕ್ಕೆ ಬಂದ ಗೆಲುವಿಗೆ ಸ್ಪರ್ಧೆ ಏರ್ಪಟ್ಟಿದೆ. ಪ್ರತಿಯೊಬ್ಬ ಸ್ಪರ್ದಿಯು ಕೂಡ ತಮ್ಮ ಸಾಮರ್ಥ್ಯ ತೋರಿಸುತ್ತಾ ಇದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ 12 ಬಾರಿ ಕುತೂಹಲ ಮೂಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಮತ್ತು ರಕ್ಷಿತಾ ಶೆಟ್ಟಿ ಇವರಿಗೆ ದೊಡ್ಡ ಅಭಿಮಾನ ಬಳಗವೇ ಇದೆ. ಈ ಬಾರಿ ಬಿಗ್ ಬಾಸ್ ವಿನ್ನರ್ ಗಿಲ್ಲಿ ಅಥವಾ ರಕ್ಷಿತಾ ಎಂದು ಹೆಚ್ಚಿನ ಜನರು ಅಭಿಪ್ರಾಯಪಟ್ಟಿದ್ದಾರೆ. ಮಂಡ್ಯದ ಕುವರ ಗಿಲ್ಲಿ ಹಾಗೂ ಕರಾವಳಿಯ ಕುವರಿ ರಕ್ಷಿತಾ ಶೆಟ್ಟಿ, ಇವರಿಬ್ಬರ ನಡುವೆ ಬಿಗ್ ಬಾಸ್ ನೇರ ಸ್ಪರ್ಧೆ ಏರ್ಪಟ್ಟಿದೆ ಎಂದರು ಕೂಡ ತಪ್ಪಾಗಲಾರದು.
           ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳನ್ನು ಗಮನಿಸಿದರೆ ಬಹುತೇಕವಾಗಿ ಪ್ರಸಕ್ತ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಯಾರು ಎನ್ನುವುದು ಬಹುತೇಕ ಖಚಿತವಾಗಲಿದೆ. ಸದ್ಯಕ್ಕಂತೂ ಇವರಿಬ್ಬರ ನಡುವೆ ನೇರ ಸ್ಪರ್ಧೆ ಇರುವುದಂತೂ ಕಂಡು ಬರುತ್ತಿದೆ. ಅದೇನೇ ಇದ್ದರೂ ಕೂಡ ಅಂತಿಮವಾಗಿ ವಿಜೇತರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿ ಉಳಿದಿದೆ. ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನು ಕೆಲವೇ ದಿನಗಳು ಕಾಯಬೇಕಾಗಿದೆ.