ಸುದ್ಧಿಕನ್ನಡ ವಾರ್ತೆ
ಶಿವಮೊಗ್ಗ: ಪ್ರಯತ್ನಪಟ್ಟರೆ ಭಗವಂತನ ದರ್ಶನ ಮಾಡಬಹುದು ಎಂಬುದನ್ನು ತೋರಿಸಿಕೊಡುವುದೇ ಭಗವಧ್ಗೀತೆಯ 11 ನೇಯ ಅಧ್ಯಾಯ. ಅನನ್ಯ ಭಕ್ತಿಯ ಮನಸ್ಶಿತಿಯನ್ನು ಸಂಪಾದನೆ ಮಾಡಿಕೊಂಡರೆ ಯಾರಾದರೂ ಭಗವಂತನ ದರ್ಶನ ಮಾಡಬಹುದು ಎಂದು ಶಿರಸಿ ಸೋಂದಾದ ಸ್ವರ್ಣವಲ್ಲಿಯ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ನುಡಿದರು. ಶಿವಮೊಗ್ಗದಲ್ಲಿ ಭಾನುವಾರ ಆಯೋಜಿಸಿದ್ದ ಭಗವಧ್ಗೀತಾ ಅಭಿಯಾನ ಮಹಾಸಮರ್ಪಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ಭಗವಧ್ಘೀತಾ ಅಭಿಯಾನ ಕೇವಲ ಒಂದು ವಾರ,ತಿಂಗಳು ಅಭಿಯಾನ ಮಾಡಿ ಬಿಟ್ಟರೆ ಪ್ರಯೋಜನವಾಗುವುದಿಲ್ಲ. ಇದು ನಿರಂತರ ಸಾಗಬೇಕು. ನಿರಂತರವಾಗಿದ್ದರೆ ಇದರ ಪರಿಣಾಮವಾಗುತ್ತದೆ. ಎಲ್ಲ ಶಾಲೆಯಲ್ಲಿ , ದೇವಸ್ಥಾನಗಳಲ್ಲಿ ಭಗವಧ್ಘೀತಾ ಅಭಿಯಾನ ನಡೆಯುವಂತಾಗಬೇಕು ಎಂದು ಸೋಂದಾ ಶ್ರೀಗಳು ನುಡಿದರು. ಕಳೆದ 18 ವರ್ಷಗಳಲ್ಲಿ ಭಗವಧ್ಗೀತಾ ಮಹಾ ಸಮರ್ಪಣೆ ಎಂದಿಗೂ ನವೆಂಬರ್ ತಿಂಗಳಳ್ಲಿ ಆಗಿಲ್ಲ. ನವೆಂಬರ್ ತಿಂಗಳು ಅಂದರೆ 11 ನೇಯ ತಿಂಗಳು. ಈ 11 ನೇಯ ತಿಂಗಳಿಗೆ 11 ನೇಯ ಅಧ್ಯಾಯ ಪಠಣ ನಡೆದಿದೆ. ನಾವು ಇಂದು 10 ಗಂಟೆಗೆ ಕಾರ್ಯಕ್ರಮ ಆರಂಭಿಸಲು ಎಷ್ಟೇ ಪ್ರಯತ್ನ ಪಟ್ಟರೂ 11 ಗಂಟೆಗೇ ಕಾರ್ಯಕ್ರಮ ಆರಂಭಗೊಂಡಿದೆ. ಈ ಹನ್ನೊಂದರ ಗಂಟು ಹೆಚ್ಚಿದೆ ಎಂದರು.
ಶಿವಮೊಗ್ಗದಲ್ಲಿ ಭಗವಧ್ಗೀತಾ ಅಭಿಯಾನದಲ್ಲಿ ಆದಿಚುಂಚನಗಿರಿ ಮಠದ ಸಹಕಾರಕ್ಕೆ ಲೆಕ್ಕವಿಲ್ಲ, ಹೇಳಲು ಲೆಕ್ಕವಿಲ್ಲ. ನಿನ್ನೆ ನಡೆದ ರಾಜ್ಯಮಟ್ಟದ ಸ್ಫರ್ಧೆಯಲ್ಲಿ ಇಷ್ಟು ಜನ ಭಾಗವಹಿಸಿದ್ದೇ ಇಲ್ಲ. 18 ಜಿಲ್ಲೆಗಳಿಂದ ಬಂದಿದ್ದಾರೆ. 200 ಕ್ಕೂ ಹೆಚ್ಚು ಜನ ಸ್ಫರ್ಧಾಳುಗಳು ಭಾಗವಹಿಸಿದ್ದಾರೆ. ಅಭಿಯಾನ ಆರಂಭಗೊಂಡಾನಿಂದ ವಿವಿದೆಡೆಯಿಂದ ಸಹಕಾರ ಲಭಿಸುತ್ತಲೇ ಇದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಗಳು ನುಡಿದರು.

ಸಮಾರಂಭದ ಉಧ್ಘಾಟನೆ ನೆರವೇರಿಸಿದ ಗೋವಾದ ಸುಪುತ್ರ ಹಾಗೂ ಕೇರಳದ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಮಾತನಾಡಿ- ಭಗವಧ್ಗೀತೆಯ ಜ್ಞಾನ ಎಂದಿಗೂ ನಷ್ಠವಾಗುವುದಿಲ್ಲ. ಇದು ಎಂದಿಗೂ ಶಾಶ್ವತ ಹಾಗೂ ನಿರಂತರ. ಭಗವಧ್ಗೀತಾ ಅಭಿಯಾನದಂತಹ ಕಾರ್ಯಕ್ರಮಗಳು ನಮಗೆ ಅಭಿಮಾನದ ವಿಷಯವಾಗಿದೆ. ಭಗವಧ್ಗೀತೆಯು ಇಡೀ ವಿಶ್ವಕ್ಕೆ ಪೂಜನೀಯವಾಗಿದೆ. ಇಂತಹ ಜ್ಞಾನ ಯೀಗದ ಅಭಿಯಾನವನ್ನು ಸೋಂದಾ ಶ್ರೀಗಳು ಕಳೆದ ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಈ ಅಭಿಯಾನ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆಯೇ ಇಡೀ ದೇಶದಲ್ಲಿ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ- ಕಳೆದ ಎರಡು ದಿನಗಳ ಹಿಂದೆ ಉಡುಪಿಯ ಕಾರ್ಯಕ್ರಮದಲ್ಲಿ ಭಗವಧ್ಗೀತೆಯ ಕೊನೇಯ ಶ್ಲೋಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಪಠಣ ಮಾಡಿದ್ದಾರೆ. ಪ್ರತಿ ಶಾಲೆಯಲ್ಲಿಯೂ ಭಗವಧ್ಗೀತಾ ಅಭಿಯಾ ನಡೆಯಬೇಕು. ಹಿಂದೂ ಧರ್ಮದ ರಕ್ಷಣೆಗಾಗಿ ಪೂಜ್ಯರು ಭಗವಧ್ಘೀತಾ ಅಭಿಯಾನ ನಡೆಸುತ್ತಲೇ ಬಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಮಾತನಾಡಿ- ನಮ್ಮ ಜೀವನದ ಪ್ರತಿಯೊಂದೂ ಸಮಸ್ಯೆಗೂ ಭಗವಧ್ಘೀತೆಯಲ್ಲಿ ಪರಿಹಾರವಿದೆ. ನಮ್ಮ ಸನಾತನ ಧರ್ಮದ ಸಂರಕ್ಣೆ ದೃಷ್ಠಿಯಿಂದ ಶ್ರೀಗಳು ಕಳೆದ 18 ವರ್ಷಗಳಿಂದ ಭಗವಧ್ಘೀತಾ ಅಭಿಯಾನ ನಡೆಸಿಕೊಂಡು ಬಂದಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ನಡೆದ ಈ ಸಮಾರಂಭದಲ್ಲಿ ವೇದಿಕೆಯ ಮೇಲೆ ಮಠಾಧೀಶರಾದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಜಿ, ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಶ್ರೀ ನಾಗಮಯಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತೆಯರಿಂದ ಭಗವಧ್ಗೀತೆಯ 11 ನೇಯ ಅಧ್ಯಾಯದ ಶ್ಲೋಕ ಪಠಣೆ ನಡೆಯಿತು.
