ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ 26 ರಂದು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನ ಮಾಡುವ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಾರುತಿ ಪಾದನಕಟ್ಟಿ ವಿಜ್ಞಾನ ಹಾಗೂ ಗಣಿತ ವಿಷಯಗಳು ಕಬ್ಬಿಣದ ಕಡಲೆಯಲ್ಲ,ಇಂತಹ ಕಾರ್ಯಾಗಾರಗಳಿಂದ ಮಕ್ಕಳಿಗೆ ವಿಜ್ಞಾನದ ಕಠಿಣ ವಿಷಯಗಳು ಪ್ರಯೋಗಗಳಿಂದ ಅತೀ ಸುಲಭವಾಗಿ ಅರ್ಥವಾಗುತ್ತದೆ.ಇದರ ಲಾಭ ಎಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಜ್ಯ ಮಟ್ಟದ ಶ್ರೀ ರಾಘವೇಂದ್ರ ಮಿಶಾಳೆ ವಿಜಾಪುರರವರು ಭೌತವಿಜ್ಞಾನದ ಬೆಳಕು ಪ್ರತಿಫಲನ ಮತ್ತು ವಕ್ರೀಭವನ, ವಿದ್ಯುಚ್ಛಕ್ತಿ, ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು,ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು ಈ ಘಟಕಗಳ ಮೇಲೆ ಸರಳ ಪ್ರಯೋಗಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಎಲ್ಲಾ ಎಸ್ಎಸ್ಎಲ್ ಸಿ ಮಕ್ಕಳಿಗೆ ಸುಮಾರು 27 ಅಂಕಗಳು ಕವರ್ ಆಗುವಂತೆ ಈ ಕಾರ್ಯಾಗಾರ ಯಶಸ್ವಿಯಾಗಿ ನೇರವೇರಿತು.ಎಲ್ಲಾ ಶಿಕ್ಷಕವೃಂದ ಹಾಗೂ ಎಸ್ಎಸ್ಎಲ್ ಸಿಯ ಸುಮಾರು 115 ಮಕ್ಕಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.