ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಪಣಸೋಲಿ ಆನೆ ಶಿಬಿರಕ್ಕೆ ಹೊಸದಾಗಿ ಎರಡು ಆನೆಗಳನ್ನು ತರಲಾಗಿದೆ. ಒಂದು 18 ವರ್ಷದ ಗಂಡಾನೆ ಮತ್ತೊಂದು 8 ವರ್ಷದ ಮರಿಯಾನೆ. ಇದರಿಂದಾಗಿ ಪಣಸೋಲಿ ಯಲ್ಲಿ ಸಂಭ್ರಮ ಮನೆ ಮಾಡಿದೆ.

ಈಗಾಗಲೇ ಪಣಸೋಲಿ ಯಲ್ಲಿ ಒಂದು ಹೆಣ್ಣಾನೆ ಇದ್ದು ಗಂಡಾನೆ ಇರಲಿಲ್ಲ. ಈ ಕೊರತೆಯನ್ನು ಅರಣ್ಯ ಇಲಾಖೆ ತುಂಬಿದಂತಾಗಿದೆ. ಶಾಸಕರು ಮತ್ತು ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು ಆಗಿರುವ ಆರ್ ವಿ ದೇಶಪಾಂಡೆ ಅವರು ಈ ಸಂದರ್ಭದಲ್ಲಿ ಹೊಸದಾಗಿ ಬಂದಿರುವ ಆನೆಗೆ ಹೂ ಮಾಲೆ ಹಾಕಿ ಸ್ವಾಗತಿಸಿ ಮಾತನಾಡಿ , ಆನೆಗಳು ಬಂದಿರುವದು ತುಂಬಾ ಸಂತಸದ ವಿಷಯ, ಆನೆ ಶಿಬಿರ ದಲ್ಲಿ ಗಂಡು ಆನೆ ಹೆಣ್ಣು ಆನೆ ಇಬ್ಬರೂ ಇದ್ದಾಗ ಅವರ ಸಾಂಸಾರಿಕ ಜೀವನ ಕೂಡ ಸುಂದರ ವಾಗಿರುತ್ತದೆ ಅಂತ ಸಂದರ್ಭ ಅರಣ್ಯ ಇಲಾಖೆ ಮಾಡಿದೆ. ಇದರಿಂದ ಪ್ರವಾಸೋದ್ಯಮ ಬೆಳೆಯಲಿಕ್ಕೂ ತುಂಬಾ ಅನುಕೂಲ ಹಾಗಾಗಿ ಅರಣ್ಯ ಇಲಾಖೆಯ ಕಾರ್ಯ ಮೆಚ್ಚುವಂತಹದು ಎಂದರು ಇದಕ್ಕೂ ಮೊದಲು ಕಾಳಿ ಹುಲಿ ಯೋಜನಾ ನಿರ್ದೇಶಕರು ನಿಲೇಶ್ ಶಿಂದೆ ಅವರು ಆನೆಗಳ ಮಾಹಿತಿ ಯನ್ನು ಶಾಸಕರಿಗೆ ನೀಡಿದರು.

ಪಣಸೋಲಿ ವಲಯ ಅರಣ್ಯ ಅಧಿಕಾರಿ ರವಿಕಿರಣ ಸಂಪಗಾವಿ ಅಚ್ಚು ಕಟ್ಟಾಗಿ ಕಾರ್ಯಕ್ರಮ ದ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಕೆ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕೃಷ್ಣಾ ದೇಸಾಯಿ ಕಾಳಿ ಹುಲಿ ಯೋಜನಾ ನಿರ್ದೇಶಕರಾದ ನಿಲೇಶ್ ಶಿಂದೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಧಿಕಾರಿಗಳು ಇಲಾಖೆಯ ನೌಕರರು ಸಿಬ್ಬಂದಿ ಗಳು ಗ್ರಾಮಸ್ಥರು ಉಪಸ್ಥಿತರಿದ್ದರು.