ಸುದ್ದಿ ಕನ್ನಡ ವಾರ್ತೆ

ಜೋಯಿಡಾ ರಾಮನಗರದಲ್ಲಿ ಎನ್.ಎಸ್.ಎಸ್.ವಿಶೇಷ ಶಿಬಿರಕ್ಕೆ ಚಾಲನೆ . ಬಿಜಿವಿಎಸ್ ಪದವಿಪೂರ್ವ ಕಾಲೇಜು ರಾಮನಗರದಲ್ಲಿ ಎನ್.ಎಸ್.ಎಸ್ ವಿಶೇಷ ಶಿಬಿರ ಉದ್ಘಾಟನೆಗೊಂಡಿತು .

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅನಿಲ ಕುಮಾರ ದೇವರ್ಸಿ ಪ್ರಾಚಾರ್ಯರು ಪದವಿ ಬಿ.ಜಿ.ವಿ.ಎಸ್ ರಾಮನಗರ, ಪ್ರೇಮಾನಂದ ಎಸ್.ಪರಬ ಪ್ರಾಚಾರ್ಯರು ಪದವಿ ಪೂರ್ವ ಕಾಲೇಜು ರಾಮನಗರ. ಏನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಮಲ್ಲಿಕಾರ್ಜುನ ಎಸ್ ಕಮ್ಮಾರ.ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸಿ , ಶಿಬಿರವಾಣಿ ಓದುವ ಮೂಲಕಗಣ್ಯರು ಚಾಲನೆ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಮೇಘನಾ ಆರ್. ನಾಯ್ಕ ನೆರವೇರಿಸಿದರು ಪ್ರಾರ್ಥನೆಯನ್ನು ಕುಮಾರಿ ಅಂಜಲಿ ಸಂಗಡಿಗರಿಂದ ನಡೆಯಿತು ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಮಲ್ಲಿಕಾರ್ಜುನ ಕಮ್ಮಾರ್ ಎನ್ಎಸ್ಎಸ್ ವಿಶೇಷ ಶಿಬಿರದ ವರದಿ ವಾಚನ ಮಾಡಿದರು ,ಅತಿಥಿಗಳ ಸ್ವಾಗತವನ್ನು ಶ್ರೀಮತಿ ಭಾರತಿ ಏಚ್ .ಕುಂಬಾರ್ ಮಾಡಿದರು. ಕಾರ್ಯಕ್ರಮದ ವಂದನಾರ್ಪಣೆ ರಾಜೇಶ್ ಪಿ ದೇಸಾಯಿ ಮಾಡಿದರು.