ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಮಹದಾಯಿ ವನ್ಯಜೀವಿ ಧಾಮವನ್ನು ಹೊರಗಿಟ್ಟು ನಾಲ್ಕು ವನ್ಯಜೀವಿ ಧಾಮಗಳನ್ನು ಸೇರಿಸಿ ಗೋವಾ ಹುಲಿ ಅಭಯಾರಣ್ಯ ಸ್ಥಾಪಿಸಬೇಕು ಎಂದು ಕೇಂದ್ರ ಉನ್ನತಾಧಿಕಾರ ಸಮೀತಿಯು ಶಿಫಾರಸ್ಸು ಮಾಡಿದೆ.
ಗೋವಾ ರಾಜ್ಯದ ಮಹದಾಯಿ-ಕೋತಿಗಾಂವ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಅಥವಾ ಯೋಜನೆಗಳನ್ನು ಕೈಗೊಳ್ಳಬಾರದು ಎಂಸು ಸರ್ವೋಚ್ಛ ನ್ಯಾಯಾಲಯ ಸಪ್ಟೆಂಬರ್ ನಲ್ಲಿ ನಿರ್ದೇಶನ ನೀಡಿತ್ತು. ಮಹದಾಯಿ ವನ್ಯಜೀವಿ ಅಭಯಾರಣ್ಯ ಮತ್ತು ಅಕ್ಕಪಕ್ಕದ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಅಧಿಸೂಚನೆ ಹೊರಡಿಸುವ ಕುರಿತಂತೆ 6 ವಾರಗಳಲ್ಲಿ ಸಿಇಸಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ನಿರ್ದೇಶನ ನೀಡಿತ್ತು.
ಇದೀಗ ಉನ್ನತಾಧಿಕಾರ ಸಮೀತಿಯು ಸರ್ವೋಚ್ಛ ನ್ಯಾಯಾಕಯಕ್ಕೆ 279 ಪುಟಗಳ ವರದಿಯನ್ನು ಸಲ್ಲಿಸಿದೆ. ಗೋವಾ ರಾಜ್ಯ ಸರ್ಕಾರವು ಮೂರು ತಿಂಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶ (ಅಭಯಾರಣ್ಯ) ಸ್ಥಾಪಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಉನ್ನತಾಧಿಕಾರ ಸಮೀತಿ ಶಿಫಾರಸ್ಸು ಮಾಡಿದೆ.
ಗೋವಾದಲ್ಲಿರುವ ಭಗವಾನ್ ಮಹಾವೀರ ವನ್ಯಜೀವಿ ಧಾಮದ ದಕ್ಷುಣ ಭಾಗ ಸುಮಾರು 560 ಮನೆಗಳನ್ನು ಹೊಂದಿದೆ. ಮಹದಾಯಿ ವನ್ಯಜೀವಿ ಧಾಮವು 612 ಮನೆಗಳನ್ನು ಹೊಂದಿದೆ. ಇವುಗಳು ಹುಲಿ ಅಭಯಾರಣ್ಯದ ವ್ಯಾಪ್ತಿಗೆ ಸೇರಿಲ್ಲ. ಈ ಪ್ರದೇಶಗಳನ್ನು ಹುಲಿ ಅಭಯಾರಣ್ಯದ ವ್ಯಾಪ್ತಿಗೆ ಸೇರಿಸುವ ಮುನ್ನ ಜನರಲ್ಲಿ ಜಾಗೃತಿ ಮೂಡಿಸಿ ಸಾಲೋಚನೆ ನಡೆಸಬೇಕೆಂದು ಕೂಡ ಕೇಂದ್ರ ಉನ್ನತಾಧಿಕಾರ ಸಮೀತಿ ಅಭಿಪ್ರಾಯಪಟ್ಟಿದೆ.
