ಸುದ್ದಿ ಕನ್ನಡ ವಾರ್ತೆ
ದಾಂಡೇಲಿ ನಗರದ ಡಿ ಎಫ್ ಎ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶೋಭಾ ಸುಹಾಸ ನಾಯಕರವರಿಗೆ ರೋಟರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಕ್ಲಬ್ ದಾಂಡೇಲಿ ವತಿಯಿಂದ 2025 ನೇ ಸಾಲಿನ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಳೆದ 22 ವರ್ಷಗಳಿಂದ ಶಿಕ್ಷಣ ವೃತ್ತಿಯಲ್ಲಿ ತೊಡಗಿಸಿಕೊಂಡು ದೇಶದ ಭವಿಷ್ಯವನ್ನು ರೂಪಿಸುವ ಕಾಯಕ ಮಾಡುತ್ತ ಬಂದಿದ್ದಾರೆ. ಇವರಿಂದ ಪ್ರೋತ್ಸಾಹ ಪಡೆದು ಹಲವು ಮಕ್ಕಳು ಉನ್ನತ ಸ್ಥಾನಕ್ಕೇರಿದ್ದಾರೆ.
ಇವರ ಈ ಶೈಕ್ಷಣಿಕ ಸೇವೆಗೆ ಈ ಪ್ರಶಸ್ತಿಯು ಒಲಿದು ಬಂದಿದೆ.
ಈ ಸಮಯದಲ್ಲಿ ರೋಟರಿ ಜಿಲ್ಲಾ ಪ್ರಾಂತಪಾಲರಾದ ಅರುಣ್ ಭಂಡಾರಿ ರೋಟರಿ ಕ್ಲಬ್ ದಾಂಡೇಲಿ ಅಧ್ಯಕ್ಷರಾದ ಅಶುತೋಷ್ ಕುಮಾರ್ ರಾಯ್ ,ಆರ್ ಪಿ ನಾಯ್ಕ, ರಾಹುಲ್ ಬಾವಾಜಿ,ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಶ್ವೇತಾ ಜಾಧವ ಹಾಗೂ ರೋಟರಿ ಕ್ಲಬ್ ನ ಪ್ರಮುಖರು ಹಾಜರಿದ್ದರು.
