Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಹುಡಸಾ ಗ್ರಾಮದ ವ್ಯಾಪ್ತಿಯಲ್ಲಿನ ಮುಂಡಗೋಡ-ಅಣಶಿ ರಾಜ್ಯ ಹೆದ್ದಾರಿಯಲ್ಲಿನ ಪೋಟೋಲಿ-ಗುಂದ- ಉಳವಿ ಮಾರ್ಗದಲ್ಲಿರುವ ಕೈಟಾನಾಲಾ ಸೇತುವೆ ಕುಸಿದು ಐದಾರು ತಿಂಗಳು,ಮಳೆಗಾಲ ಮುಗಿದು ತಿಂಗಳಾದರೂ ಲೋಕೋಪಯೋಗಿ ಇಲಾಖೆಯವರು ಇನ್ನೂ ಕಾಮಗಾರಿ ಆರಂಭಿಸದೇ ಇರದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Banner Ad

ಈಗಾಗಲೇ ಸೇತುವೆಯ ಕುಸಿತದ ಪರಿಣಾಮ ಐದಾರು ತಿಂಗಳಿಂದ ಬಸ್ ಸಂಚಾರ ನಿಂತಿದ್ದು,ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನೆಂಟರ ಮನೆಯಲ್ಲಿಯೂ,ರೂಮ್ ಮಾಡಿಕೊಂಡು ಶಿಕ್ಷಣ ಕಲಿಯುವುದು,ಸಾರ್ವಜನಿಕರು ಅನಿವಾರ್ಯ ಸಂದರ್ಭದಲ್ಲಿ ಖಾಸಗಿ ವಾಹನದಲ್ಲಿ ಪ್ರಯಾಣಿಸುವುದು,ಕೃಷಿಕರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು, ಉಪಕರಣದ ಸಾಮಗ್ರಿಗಳನ್ನು ತರಲು ದೂರದ ಮಾರ್ಗಗಳನ್ನು ಬಳಸಬೇಕಾಗಿದೆ. ಅಭಿವೃದ್ಧಿ ಪರ ಶಾಸಕರಾದ ಮಾನ್ಯ ಆರ್.ವಿ.ದೇಶಪಾಂಡೆ ಸಾಹೇಬರು ಕೆ.ಡಿ.ಪಿ ಸಭೆಯಲ್ಲಿ ಮಳೆ ಮುಗಿದ ತಕ್ಷಣ ಕೆಲಸ ಆರಂಭಿಸುವಂತೆ ಸೂಚನೆ ನೀಡಿದರು,ಅಧಿಕಾರಿ ವರ್ಗದವರು ಇನ್ನೂ ಕೆಲಸ ಪ್ರಾರಂಭಿಸುವುದರಲ್ಲಿ ಮೀನಮೇಷ ಎಣಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ದೇಸಾಯಿವಾಡಾ ಹತ್ತಿರದ ಹಳ್ಳದ ಸೇತುವೆ ಕುಸಿದು ಹಲವು ತೊಂದರೆಗಳನ್ನು ಅನುಭವಿಸಿದ್ದು ಸಂಬಂಧ ಪಟ್ಟ ಇಲಾಖೆಯವರಿಗೆ,ಸಾರ್ವಜನಿಕರಿಗೆ ಗೊತ್ತಿರುವ ವಿಷಯ. ಈ ಸೇತುವೆಯ ಕುಸಿತದ ಪರಿಣಾಮ ಸಿಂಥೇರಿ ರಾಕ್ ಸೇರಿದಂತೆ ಪ್ರವಾಸಿ ತಾಣಗಳ ಪ್ರವಾಸೋದ್ಯಮ ಚಟುವಟಿಕೆಗಳಿಗೆ ನಷ್ಟ ಉಂಟಾಗಿದೆ. ಸಂಬಂಧ ಪಟ್ಟ ಇಲಾಖೆಯವರು ಅಡೆತಡೆಗಳನ್ನು ನಿವಾರಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬದಲಿ ಮಾರ್ಗವನ್ನು ನಿರ್ಮಿಸಿ,ಸೇತುವೆ ನಿರ್ಮಾಣದ ಕಾಮಗಾರಿಯನ್ನು ಶೀಘ್ರ ಪ್ರಾರಂಬಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Banner Ad