ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಡಗಾಂವ ರೈಲ್ವೆ ನಿಲ್ದಾಣದಲ್ಲಿ (Konkan Railway) ಡ್ಯೂಟಿಯಲ್ಲಿದ್ದ ಆರ್ ಪಿ ಎಫ್ ಕಾನ್ ಸ್ಟೇಬಲ್ ಕೂಡಲೆ ಎಚ್ಚೆತ್ತು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದರಿಂದ ಪ್ರವಾಸಿಯೋರ್ವರ ಜೀವ ಉಳಿದಂತಾಗಿದೆ. ಚಲಿಸುತ್ತಿದ್ದ ರೈಲನ್ನು ಹತ್ತುವ ಸಂದರ್ಭದಲ್ಲಿ ಪ್ರವಾಸಿಯು ಕಾಲುತಪ್ಪಿ ಬೀಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೆ ಇದ್ದ ಆರ್ ಪಿ ಎಫ್ ಕಾನ್ ಸ್ಟೇಬಲ್ ಕಪಿಲ್ ಸೈನಿ ರವರು ರಕ್ಷಣಾ ಕಾರ್ಯಕ್ಕೆ ಧಾವಿಸಿ ಪ್ರವಾಸಿಯನ್ನು ರಕ್ಷಿಸಿದ್ದಾರೆ. ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಲಿಸುತ್ತಿದ್ದ ರೈಲನ್ನು ಹತ್ತುವ ಪ್ರಯತ್ನದಲ್ಲಿದ್ದಾಗ ಕಾಲುಜಾರಿ ರೈಲ್ವೆ ಅಡಿಗೆ ಸುಲುಕುವ ಆತಂಕವಿತ್ತು. ಆದರೆ ಈ ಘಟನೆ ಕಂಡ ಕೂಡಲೇ ಕಾನ್ ಸ್ಟೇಬಲ್ ರವರು ಪ್ರವಾಸಿಯ ಜೀವ ರಕ್ಷಣೆ ಮಾಡಿದ್ದಾರೆ. ಒಂದು ವೇಳೆ ಕಾನ್ ಸ್ಟೇಬಲ್ ಕಪಿಲ್ ಸೈನಿ ರವರು ಕೂಡಲೇ ರಕ್ಷಣೆಗೆ ಧಾವಿಸದಿದ್ದರೆ ಭಾರಿ ಅವಘಡವೇ ಸಂಭವಿಸುತ್ತಿತ್ತು.
ಕೊಂಕಣ ರೈಲ್ವೆಯ ಪ್ರಮುಖ ನಿಲ್ದಾಣ ವಾಗಿರುವ ಮಡಗಾಂವ ರೈಲ್ವೆ ನಿಲ್ದಾಣದಲ್ಲಿ ದಿನದ 24 ಗಂಟೆಯೂ ಕೂಡ ಆರ್ ಪಿ ಎಫ್ ಸಿಬ್ಬಂಧಿಗಳು ಸುರಕ್ಷತೆಗಾಗಿ ಇರುತ್ತಾರೆ. ಇದೀಗ ಮಡಗಾಂವ ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಘಟನೆಯಲ್ಲಿ ಕಾನ್ ಸ್ಟೇವಲ್ ರವರು ವೇಗವಾಗಿ ಧಾವಿಸಿ ಬಂದು ಪ್ರವಾಸಿಯನ್ನು ರಕ್ಷಣೆ ಮಾಡಿರುವ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಚಲಿಸುತ್ತಿರುವ ರೈಲಿನಿಂದ ಇಳಿಯುವುದಾಗಲೀ ಅಥವಾ ಇಂತಹ ಸಂದರ್ಭದಲ್ಲಿ ರೈಲನ್ನು ಹತ್ತುವ ಕೆಲಸವನ್ನು ಪ್ರಯಾಣಿಕರು ಮಾಡಬಾರದು ಎಂದು ಕೊಂಕಣ ರೈಲ್ವೆ ಎಚ್ಚರಿಕೆ ನೀಡಿದೆ.
