ಸುದ್ಧಿಕನ್ನಡ ವಾರ್ತೆ
ಪಣಜಿ: ಸ್ವರ್ಣವಲ್ಲೀ ಸೀಮಾ ಪರಿಷತ್ ಗೋವಾ, ಶ್ರೀಮದ್ ಜಗಧ್ಗುರು ಶಂಕರಾಚಾರ್ಯ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀಮದ್ ಶ್ರೀ ಆನಂದಬೋಧೇಂದ್ರ ಸ್ವರಸ್ವತೀ ಮಹಾಸ್ವಾಮಿಗಳು ಇವರ ಆಶೀರ್ವಾದದೊಂದಿಗೆ ಶ್ರೀಭಗವಧ್ಗೀತಾ ಅಭಿಯಾನ 2025 ರ ಅಂಗವಾಗಿ 11 ನೇಯ ಅಧ್ಯಾಯ ಪಠಣ ಕಾರ್ಯಕ್ರಮವು ನವೆಂಬರ್ 23 ಭಾನುವಾರ ಮಧ್ಯಾನ್ಹ 3 ಗಂಟೆಯಿಂದ ಗೋವಾ ವೆರ್ಣಾದ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಗೋವಾದ ವಿವಿದೆಡೆ ನೆಲೆಸಿರುವ ನೂರಾರು ಜನ ಹವ್ಯಕ ಬಾಂಧವರು ಪಾಲ್ಗೊಂಡಿದ್ದರು. ಶ್ರೀ ಭಗವಧ್ಗೀತೆಯ 11 ನೇಯ ಅಧ್ಯಾಯ ಪಠಣೆ, ಶಂಕರ ಸ್ತೋತ್ರ, ಭಜನೆ ಕಾರ್ಯಕ್ರಮ ನಡೆಯಿತು. ಚಿಕ್ಕ ಮಕ್ಕಳಿಂದ ಶ್ರೀ ಭಗವಧ್ಗೀತೆಯ 15 ನೇಯ ಅಧ್ಯಾಯ ಪಠಣೆ ಕಾರ್ಯಕ್ರಮ ಕೂಡ ಜರುಗಿತು.
ಕಳೆದ ಕೆಲವು ದಿನಗಳಿಂದ ಆನ್ ಲೈನ್ ನಲ್ಲಿ ಶ್ರೀ ಭಗವಧ್ಗೀತಾ ಅಭಿಯಾನದ ಅಂಗವಾಗಿ 11 ನೇಯ ಅಧ್ಯಾಯ ಪಠಣ ಕಾರ್ಯಕ್ರಮವನ್ನು ಕೂಡ ನಡೆಸಲಾಗಿತ್ತು.
