ಸುದ್ಧಿಕನ್ನಡ ವಾರ್ತೆ
ಪ್ರಸಕ್ತ ಬಿಗ್ ಬಾಸ್ ಕನ್ನಡ (Big Boss Kannada) ಸೀಜನ್ ನಲ್ಲಿ ಗಿಲ್ಲಿನಟರ ಫ್ಯಾನ್ ಅಬ್ಬರ ಜೋರಾಗಿರುವುದು ಕಂಡುಬರುತ್ತಿದೆ. ಪ್ರಸಕ್ತ ಸೀಜನ್ ನಲ್ಲಿ ಗಿಲ್ಲಿನೇ ಬಿಗ್ ಬಾಸ್  (Big Boss) ಗೆಲ್ಲೊದು ಎಂಬ ವಿಶ್ವಾಸದಲ್ಲಿ ಹೆಚ್ಚಿನ ಪ್ರೇಕ್ಷಕರಿದ್ದಾರೆ.

ಆದರೆ ಬಿಗ್ ಬಾಸ್ (Big Boss) ನಿಂದ ಗಿಲ್ಲಿಯನ್ನು ಹೊರಹಾಕಲು ಉಳಿದ ಸ್ಫರ್ಧಿಗಳು ತಂತ್ರ ರೂಪಿಸಿದ್ದಾರೆ. ಇಷ್ಟು ದಿನ ಗಿಲ್ಲಿ ಜೊತೆಯಲ್ಲಿದ್ದವರೂ ಕೂಡ ಗಿಲ್ಲಿಯ ವಿರುದ್ಧ ನೇರವಾಗಿ ಮಾತನಾಡಲು ಆರಂಭಿಸಿದ್ದಾರೆ. ಬೇಕಂತಲೇ ಬೇರೆಯವರ ಮನಸ್ಸು ನೋಯಿಸುವವರು ಯಾರು ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದಾಗ ಕಾವ್ಯ,ರಕ್ಷಿತ,ಜಾನ್ವಿ,ಅಶ್ವಿನಿ ಗೌಡ, ರಿಷಾ,ಧನುಷ್,ಧ್ರುವಂತ್ ಸೇರಿದಂತೆ ಬಹುತೇಕ ಸ್ಫರ್ಧಿಗಳು ಗಿಲ್ಲಿ ಹೆಸರನ್ನೇ ಹೇಳಿದ್ದಾರೆ. ತಮಗೆ ಅನ್ನಿಸಿದಂತೆ ಎಲ್ಲ ಸ್ಫರ್ಧಿಗಳು ಕೂಡ ಇದಕ್ಕೆ ಕಾರಣವನ್ನೂ ನೀಡಿದ್ದಾರೆ.

ಗಿಲ್ಲಿ ಕೂಡ ಸುಮ್ಮನಿರದೆಯೇ ಸ್ಫರ್ಧಿಗಳ ಮಾತಿಗೆ ನೇರವಾಗಿ ಕೌಂಟರ್ ನೀಡಿದ್ದಾರೆ. ನಿಮ್ಮ ಸತ್ಯವನ್ನೇ ನಾನು ಕಾಮಿಡಿ ರೂಪದಲ್ಲಿ ಹೇಳುತ್ತೇನೆ. ಹಾಗಂತ ಒಬ್ಬರನ್ನ ಕೆಳಕ್ಕೆ ಹಾಕಿ ಮಾತಾಡ್ತೀನಿ ಅಂತ ಅಲ್ಲ. ಇರೊ ಸತ್ಯವನ್ನೇ ಯಾರೊ ಮೂಲೆಯಲ್ಲಿ ಕುಳಿತು ಮಾತಾಡ್ತಾರೆ. ಇದೆರಲ್ಲ ನಿಮಗೆ ಗೊತ್ತಿಲ್ಲ. ಆಚೆ ಹೋದ ಮೇಲೆ ಅವರ ಮೇಲೆ ನೀವೇ ಬೇಜಾರು ಮಾಡಿಕೊಳ್ತೀರಾ. ನಾನು ಇದ್ದದ್ದು ಇದ್ದಂಗೆ ಹೇಳ್ತಿನಿ ಎಂದು ಗಿಲ್ಲಿ ಹೇಳಿದ್ದಾರೆ.

ಸೂಪರ್ ಸಂಡೆ ವಿತ್ ಬಾದಷಾ ಸುದೀಪ್  ( Kiccha sudeep)ರವರು ಗಿಲ್ಲಿಗೆ ಟಾಸ್ಕ ನೀಡಿದ್ದಾರೆ. ಅಶ್ವಿನಿ ಗೌಡ ರವರು ವಾರದ ದಿನಗಳಲ್ಲಿ ಹಾಗೂ ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಹೇಗಿರುತ್ತಾರೆ ಎಂದು ಗಿಲ್ಲಿ ರವರು ಮಿಮಿಕ್ರಿ ಮಾಡಿ ತೋರಿಸಿದ್ದಾರೆ. ಈ ಹ್ಯಾಸ್ಯದ ಅಭಿನಯ ಕಂಡು ಕಿಚ್ಚ ಸುದೀಪ್ ರವರು ಕೂಡ ನಗೆಗಡಲಲ್ಲಿ ತೇಲಾಡಿದ್ದಾರೆ. ಇಂದಿನ ಎಪಿಸೋಡ್ ಪ್ರೇಕ್ಷಕರಿಗಂತೂ ಹೆಚ್ಚಿನ ಮನೋರಂಜನೆ ನೀಡಿದೆ.