ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಮಕ್ಕಳ ಅಪಹರಣದಂತಹ ಪ್ರಕರಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿ ಕಳೆದ 45 ದಿನಗಳಲ್ಲಿ ದಕ್ಷಿಣ ಗೋವಾದ ವಿವಿಧ ಪೋಲಿಸ್ ಠಾಣೆಗಳಲ್ಲಿ 10 ಅಪ್ರಾಪ್ತ ಮಕ್ಕಳ ನಾಪತ್ತೆ ಪ್ರಕರಣ ನಡೆದಿದ್ದು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಮಕ್ಕಳ ಬಗ್ಗೆ ಸುರಕ್ಷತೆಯ ಪ್ರಶ್ನೆ ಎದುರಾಗುವಂತಾಗಿದೆ.
ಲಭ್ಯವಾದ ಮಾಹಿತಿಯ ಅನುಸಾರ- ಅಕ್ಟೋಬರ್ ತಿಂಗಳಲ್ಲಿ ಗೋವಾದ ವಾಸ್ಕೊ,ವೆರ್ಣಾ,ಪೊಂಡಾದಲ್ಲಿ ತಲಾ ಒಂದು ಪ್ರಕರಣ, ನವೆಂಬರ್ ತಿಂಗಳಲ್ಲಿ ಒಟ್ಟೂ 7 ಪ್ರಕರಣಗಳು ದಾಖಲಾಗಿದೆ. ಖೈ ಪೈಕಿ ಮಡಗಾಂವನಲ್ಲಿ ಮೂರು, ಕೋಲ್ವಾ,ಕುಂಕಳ್ಳಿ,ಕೆಫೆ ಮತ್ತು ವಾಸ್ಕೊದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಆದರೆ ಸಮಾಧಾನಕರ ಸಂಗತಿಯೆಂದರೆ ಈ ಎಲ್ಲಾ ಪ್ರಕರಣಗಳಲ್ಲಿ ಪೋಲಿಸರು ಮಕ್ಕಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಗೋವಾ ಪೋಲಿಸರ ವಿಶೇಷ ತಂಡಗಳ ಪ್ರಯತ್ನ,ತಾಂತ್ರಿಕ ನಕಣ್ಗಾವಲು, ಮತ್ತು ಆಧುನಿಕ ತಂತ್ರಜ್ಞಾನ ಬಳಕೆಯಿಂದಾಗಿ ಕಾಣೆಯಾದ ಎಲ್ಲ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಪೋಲಿಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ನಂತರ ಪೋಲಿಸರು ಮಕ್ಕಳನ್ನು ಅವರವರ ಪಾಲಕರಿಗೆ ಹಸ್ತಾಂತರಿಸಿದ್ದಾರೆ.
