ಸುದ್ದಿ ಕನ್ನಡ ವಾರ್ತೆ

ಪಣಜಿ:ಗೋಕರ್ಣದ ಕೂರ್ಸೆ ಮನೆತನದ ಶ್ರೀ ಲಕ್ಸ್ಮಿನಾರಾಯಣ ಕೂರ್ಸೆ ದಂಪತಿಗಳ ಪುತ್ರಿ ಕಾವ್ಯಶ್ರೀ ಕೂರ್ಸೆ ಅವರು ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲಿ ಕಮ ರ್ಷಿಯಲ್ ಪೈಲೆಟ್ ಲೈನ್ಸಸ್ ಪಡೆದು ತಮ್ಮ ಜೀವನದ ಮಹತ್ವದ ಗುರಿಯನ್ನು ಸಾಧಿಸಿರುವ ಇವರನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಅಭಿನಂದನೆ ಸಲ್ಲಿಸಿದ್ದಾರೆ.

ಕಾವ್ಯಶ್ರೀ ಕುರ್ಸೆ ರವರ ಮುಂದಿನ ಜೀವನ ಉಜ್ವಲವಾಗಲಿ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಭಿನಂದಿಸಿದ್ದಾರೆ.

. ಕಾವ್ಯಶ್ರೀರವರು ತಮ್ಮ ಪ್ರಾಥಮಿಕ, ಮಾಧ್ಯಮಿಕ, ಪದವಿಪೂರ್ವ ಶಿಕ್ಷಣವನ್ನು ಗೋವಾ ರಾಜ್ಯದಲ್ಲಿ ಮುಗಿಸಿ ಮಹಾರಾಷ್ಟದ ಬಾರಾಮತಿ ವಿಮಾನ ತರಬೇತಿ ಕೇಂದ್ರದಲ್ಲಿ ಒಟ್ಟು 200 ಗಂಟೆಗಳ ಹಾರಾಟ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೋಳಿಸಿದ್ದಾರೆ.

ತಮ್ಮ ತಂದೆ ಗೋವಾದಲ್ಲಿ ವೈದಿಕ ವೃತ್ತಿ ಮಾಡಿಕೊಂಡಿದ್ದಾರೆ. ಕಾವ್ಯಶ್ರೀರವರ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.