ಸುದ್ಧಿಕನ್ನಡ ವಾರ್ತೆ
ಪಣಜಿ: ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡನೇಯ ದಿನ ಸಂಜೆ ರೆಡ್ ಕಾರ್ಪೆಟ್ ನಲ್ಲಿ ಚಲನಚಿತ್ರ ಕ್ಷೇತ್ರದ ದಿಗ್ಗಜ ಕಲಾವಿದರಾದ ಜಾಕಿಶ್ರಾಫ್, ಕಮಲ್ ಹಾಸನ್, ಮನೋಜ್ ವಾಜಪೇಯಿ ರವರು ಆಗಮಿಸಿದ್ದರಿಂದ ಚಲನಚಿತ್ರೋತ್ಸವಕ್ಕೆ ಬಂದಿದ್ದ ಪ್ರೇಕ್ಷಕರು ಅವರೊಂದಿಗೆ ಪೊಟೊ ತೆಗೆಸಿಕೊಳ್ಳಲು ಮುಗಿಬಿದ್ದರು.

ಜಾಕಿಶ್ರಾಫ್ ರವರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಎಂಟ್ರಿ ಪ್ರತಿ ವರ್ಷವೂ ಚರ್ಚೆಯ ವಿಷಯವೇ ಆಗಿರುತ್ತದೆ. ಚಲನಚಿತ್ರೋತ್ಸವ ನಡೆಯುವ ಇ.ಎಸ್.ಜಿ ಬರುತ್ತಿದ್ದಂತೆಯೇ ಜಾಕೀಶ್ರಾಪ್ ರವರು ಏನು ಇಷ್ಟೊಂದು ಗರ್ದಿ…ಎಲ್ಲವೂ ಸರಿಯಾಗಿದೆ ಅಲ್ವಾ..? ಎಂದು ಕೇಳುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಸಂತಸಗೊಳಿಸಿದರು. ಜಾಜಕಿಶ್ರಾಫ್ ರವರು ತಮ್ಮ ಕುತ್ತಿಗೆಯಲ್ಲಿದ್ದ ಮರದ ಚಿತ್ರದ ಲಾಕೆಟ್ ತೋರಿಸಿ ಎಲ್ಲರೂ ಗಿಡ ನೆಟ್ಟು ದೇಶ ರಕ್ಷಿಸಿ ಎಂಬ ಸಂದೇಶ ನೀಡಿದರು.

ಕಮಲ್ ಹಾಸನ್ ರವರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಗಮಿಸಿದರು. ಅಮರನ್ ಚಲನಚಿತ್ರದ ಇಡೀ ತಂಡವೇ ರೆಡ್ ಕಾರ್ಪೇಟ್ ಮೇಲೆ ಕಂಡುಬಂತು. ಮನೋಜ್ ವಾಜಪೇಯಿ ರವರು ಕೂಡ ಆಗಮಿಸಿ ನೆರೆದಿದ್ದ ಪ್ರೇಕ್ಷಕರಿಗೆ ಕೈಬೀಸಿದರು.