ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ ತಾಲೂಕಿನ ಹೆಮ್ಮೆಯ ಪುತ್ರಿ ಡಾ. ಐಶ್ವರ್ಯ ಭಟ್ ಏಕಾನ್ ರವರು ದೇಶದ ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿರುವ INI-CET NOV 2025ರಲ್ಲಿ ಆಲ್ ಇಂಡಿಯಾ 83ನೇ ರ‍್ಯಾಂಕ್ ಪಡೆದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರವೇಶ ಪಡೆಯುವ ಮೂಲಕ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ಇಂದು ಹೆಮ್ಮೆಯ ಸಾಧಕಿ ಡಾ.ಐಶ್ವರ್ಯ ಭಟ್ ಅವರ ಯಲ್ಲಾಪುರದ ಪಟ್ಟಣದ ನಿವಾಸಕ್ಕೆ ಭೇಟಿ ನೀಡಿ ಶಾಸಕ ಶಿವರಾಮ ಹೆಬ್ಬಾರ್ ರವರು ಸನ್ಮಾನಿಸಿದರು. ಇವರ ಮುಂದಿನ ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಅವರು ಮಹತ್ತರ ಕೊಡುಗೆ ನೀಡಿ ಉನ್ನತಸ್ಥಾನವನ್ನು ಪಡೆಯುವಂತೆ ಹಾರೈಸಿದರು.
