ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಎದುರಿನಿಂದ ಬಂದ ಬೈಕ್ ತಪ್ಪಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿಸಿ ಬಸ್ ಗಟಾರಕ್ಕೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳೆಯಲ್ಲಿ ಭಾನುವಾರ ಸಂಭವಿಸಿದೆ.

ಈರಾಪುರದಿಂದ ಕಳಚೆಗೆ ತೆರಳಿ ಯಲ್ಲಾಪುರಕ್ಕೆ ಬರಬೇಕಿದ್ದ ಸರ್ಕಾರಿ ಬಸ್ಸು ಭಾನುವಾರ ಬೆಳಿಗ್ಗೆ ಗಟಾರಕ್ಕೆ ಬಿದ್ದಿದೆ. ಎದುರಿನಿಂದ ಬಂದ ಬೈಕ್ ಸವಾರನನ್ನು ತಪ್ಪಿಸುವ ಸಂದರ್ಭದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಬಿದ್ದಿದೆ.

ಸ್ಟೇರಿಂಗ್ ಕಟ್ ಆಗಿ ಬಸ್ ಬಿದ್ದಿದೆ ಎಂಬ ಸುದ್ಧಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ. ಆದರೆ ಬೈಕ್ ಸವಾರನನ್ನು ತಪ್ಪಿಸುವ ಸಂದರ್ಭದಲ್ಲಿ ಗಟಾರಕ್ಕೆ ಬಿದ್ದಿದೆ ಎಂದು ಕೆ ಎಸ್ ಆರ್ ಟಿ ಸಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಸ್ ನಲ್ಲಿ ಎಷ್ಟು ಪ್ರಯಣಿಕರಿದ್ದರು..? ಯಾರಿಗೆ ಗಾಯವಾಗಿದೆಯೇ..? ಎಂಬ ಹೆಚ್ಚಿನ ವರದಿ ಬರಬೇಕಾಗಿದೆ.