ಸುದ್ಧಿಕನ್ನಡ ವಾರ್ತೆ
ಪಣಜಿ: ಪ್ರತಿ ವರ್ಷ ಗೋವಾದಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವ  (IFFI) ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಪ್ರತಿವರ್ಷ ಇಲ್ಲಿ ಸ್ಟೇಡಿಯಂ ಒಳಗೆ ನಡೆಯುತ್ತಿದ್ದ ಉಧ್ಘಾಟನಾ ಸಮಾರಂಭವನ್ನು ಪ್ರಸಕ್ತ ವರ್ಷ ಗೋವಾ ವಿಭಿನ್ನವಾಗಿ ಆಚರಿಸಲು ಸಿರ್ಧರಿಸಿದೆ. ಗೋವಾ ಪ್ರಸಿದ್ಧಿಯ ಕಾರ್ನಿವಲ್ ರೀತಿಯಲ್ಲಿ ರೋಮಾಂಚಕ ಮೆರವಣಿಗೆ ಹಾಗೂ ಕಲಾ ಪ್ರದರ್ಶನದೊಂದಿಗೆ 56 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು  (International Film festival oF india)ಇಂದು ಉಧ್ಘಾಟಿಸಿದ್ದೇವೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸರಣ ಮಂತ್ರಿ ಎಲ್. ಮುರುಗನ್ ನುಡಿದರು.

ಪಣಜಿಯ ಇಎಸ್ ಜಿ ಎದುರು ಬಯಲು ವೇದಿಕೆಯಲ್ಲಿ ನವೆಂಬರ್ 20 ರಂದು ಗುರುವಾರ ಸಂಜೆ ಆಯೋಜಿಸಿದ್ದ 56 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಗೋವಾ ರಾಜ್ಯಪಾಲರಾದ ಅಶೋಕ ಗಜಪತಿ ರಾಜು ಚಲನಚಿತ್ರೋತ್ಸವವನ್ನು ಉಧ್ಘಾಟಿಸಿದರು.
ಇಂದು ಉತ್ತರದಕ್ಷಿಣ,ಪೂರ್ವ ಪಶ್ಚಿಮ ದ ನಮ್ಮ ಚಲನಚಿತ್ರ ಬ್ರಾತೃತ್ವು ಒಂದೇ ವೇದಿಕೆಯಲ್ಲಿ ಒಗ್ಗೂಡಿದೆ. ದಕ್ಷಿಣ ಕೋರಿಯಾದಿಂದ ಬಂದ ಸಂಸದೆ ಸುಶ್ರೀ ಜೆಯಿವ್ಯಾನ್ ಕಿಮ್ ರವರು ಸುಶ್ರಾವ್ಯವಾಗಿ ವಂದೇ ಮಾತರಂ ಗೀತೆ ಹಾಡಿದರು. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ. 2004 ರ ಮೊದಲು ವಿವಿದ ರಾಜ್ಯಗಳಲ್ಲಿ ಆಯೋಜಿಸಲಾಗುತ್ತಿದ್ದ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರೀಕರ್ ರವರು ಗೋವಾಕ್ಕೆ ಕರೆತಂದರು. ಅವರ ಅವಧಿಯಲ್ಲಿಯೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾ ಖಾಯಂ ಸ್ಥಳವನ್ನಾಗಿ ಮಾಡಿದರು ಎಂದು ಕೇಂದ್ರ ಸಚಿವ ಎಲ್.ಮುರುಗನ್ ನುಡಿದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ಮುಖ್ಯಮಂತ್ರಿ ಪ್ರಂಒದ ಸಾವಂತ್ ಮಾತನಾಡಿ- ಗೋವಾದಲ್ಲಿ ಆಯೋಜಿಸಲಾಗುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಪ್ರತಿ ವರ್ಷ ಹೊಸ ತನದಲ್ಲಿ ಬದಲಾವಣೆಯಾಗುತ್ತಲೇ ಬಂದಿದೆ. ಪ್ರಸಕ್ತ ವರ್ಷ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಪಾನ್ ದೇಶ ಕಂಟ್ರಿ ಫೋಕಸ್ ಆಗಿದೆ. ಇದರಿಂದಾಗಿ ಅಲ್ಲಿನ ಆಯ್ದ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವು ಕಾರ್ನಿವಲ್ ರೀತಿಯಲ್ಲಿ ಗೋವಾದ ಸಂಸ್ಕøತಿಯ ಮೂಲಕ ಉಧ್ಘಾಟನೆಗೊಳ್ಳುತ್ತಿದೆ. ಈ ಮೂಲಕ ಸ್ಥಳೀಯ ಸಂಸ್ಕøತಿಯನ್ನು ಹೈಲೆಟ್ ಮಾಡಲಾಗುತ್ತಿದೆ. ಗೋವಾ ರಾಜ್ಯವು ಗ್ಲೋಬಲ್ ಫಿಲ್ಮ ಡೆಸ್ಟಿನೇಶನ್ ಆಗಿದೆ. ವಿಶ್ವದ ಸಿನೆಮಾ ಕಲಾವಿದರು ಒಗ್ಗೂಡುವ ಬೃಹತ್ ವೇದಿಕೆ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕೇಂದ್ರ ಸಚಿವ ಶ್ರೀಪಾದ ನಾಯಕ, ನಿರ್ದೇಶಕ ಶೆಖರ್ ಕಪೂರ್, ಬಾಲಿವುಡ್ ನಟ ಅನುಪಮ್ ಖೇರ್, ರಾಜ್ಯಸಭಾ ಸದಸ್ಯ ಸದಾನಂದ ತಾನಾವಡೆ ಸೇರಿದಂತೆ ಚಲನಚಿತ್ರ ಕ್ಷೇತ್ರದ ಕಲಾವಿದರು ಪಾಲ್ಗೊಂಡಿದ್ದರು.

ಚಲನಚಿತ್ರ ಕ್ಷೇತ್ರದಲ್ಲಿ 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಎನ್.ಬಾಲಕೃಷ್ಣನ್ ರವರನ್ನು ಗೌರವಿಸಲಾಯಿತು. ಎಂಟರ್ ಟೈರ್ನೆಂಟ್ ಸೊಸೈಟಿ ಆಫ್ ಗೋವಾ ಕಾರ್ಯಾಲಯದ ಬಳಿಯಿಂದ ಕಲಾ ಅಕಾಡಮಿಯ ವರೆಗೆ ಪೆರೇಡ್ ನಡೆಯಿತು. ಈ ಪೆರೇಡ್ ನಲ್ಲಿ ವಿವಿಧ ರಾಜ್ಯಗಳ ಚಿತ್ರರಥಗಳು ಹಾಗೂ ಭಾರತೀಯ ಸಂಸ್ಕøತಿಯ ಪ್ರದರ್ಶನ ನಡೆಯಿತು. ಈ ಪೆರೇಡ್ ನಲ್ಲಿ ಒಟ್ಟೂ 34 ಸ್ಥಬ್ದ ಚಿತ್ರಗಳು ಭಾಗವಹಿಸಿದ್ದವು.