ಸುದ್ದಿ ಕನ್ನಡ ವಾರ್ತೆ
ಜೋಯಿಡಾ ಕಾಳಿ ಹುಲಿ ಯೋಜನಾ ಪ್ರದೇಶ ಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚುತ್ತಿದ್ದು ಇದರಿಂದಾಗಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷ ಏರ್ಪಡಲು ಕಾರಣ ವಾಗಿದೆಯೇ ಎಂಬ ಅನುಮಾನ ಸಾರ್ವಜನಿಕ ರನ್ನು ಕಾಡುತ್ತಿದೆ, ಇವು ಪ್ರವಾಸೋದ್ಯಮವನ್ನು ನಿಯಂತ್ರಿಸುವ ಪೂರ್ವ ಸೂಚಿಗನುಗುಣ ವಾಗಿ ಇದೆಯೇ ಎಂದು ಗಿರಿಧರ ಕುಲಕರ್ಣಿ ಅವರು ಕೇಂದ್ರ ಪರಿಸರ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪತ್ರ ಬರೆದು ಕೇಳಿದ್ದಾರೆ.
ಇದಕ್ಕೆ ಸಮಜಾಯಿಸಿಯನ್ನು ಕೇಂದ್ರ ಹುಲಿ ಸಂರಕ್ಷಣಾ ಪ್ರಾಧಿಕಾರ ರಾಜ್ಯದ ಪ್ರಾದೇಶಿಕ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ತಿಳಿಸಲು ಕೇಳಿ ಕೊಂಡಿದ್ದಾರೆ. ತಾಲೂಕಿನ ಹುಲಿ ಆವಾಸ ಸ್ಥಾನಗಳಾದ ವಿರನೊಲಿ, ಪಣಸೋಲಿ, ಕ್ಯಾಸಲ್ ರಾಕ್, ಸೇರಿದಂತೆ ದಾಂಡೇಲಿ ಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಎಂಬ ಹೆಸರಿನ ಜೋಯಿಡಾ ತಾಲೂಕಿನಲ್ಲಿನ ಹುಲಿ ಸಂರಕ್ಷಿತ ಪ್ರದೇಶ ಗಳಲ್ಲಿ ವಿವಿದೆಡೆ ಯಲ್ಲಿ ಹಲವಾರು ಹೋಮ್ ಸ್ಟೇ ಗಳು ರೆಸಾರ್ಟ್ ಗಳು ತಲೆ ಎತ್ತಿವೆ, ಇದು ಹುಲಿ ಮತ್ತು ಕಾಡು ಪ್ರಾಣಿಗಳ ವಂಷಾವಳಿಗೆ, ವಿಹಾರ ಗಳಿಗೆ ಮಾರಕವಾಗಿ ಪರಿಣಮಿಸಿದೆ, ಇದರಿಂದ ಕಾಡು ಪ್ರಾಣಿಗಳು ಮತ್ತು ಮಾನವರ ನಡುವೆ ಪದೇ ಪದೇ ಸಂಘರ್ಷ ಏರ್ಪಡಲು ಕಾರಣ ವಾಗಿದೆ ಎಂಬ ಅನುಮಾನ ಕೂಡ ಸಾರ್ವಜನಿಕ ರಲ್ಲಿ ಮೂಡಿದೆ.
ಹುಲಿಯೋಜನಾ ಪ್ರದೇಶದಲ್ಲಿ ಪ್ರವಾಸೋದ್ಯಮ ನಡೆಸುವುದಾದರೆ ಹುಲಿ ಯೋಜನೆ ಮಾಡಿ ಪ್ರಯೋಜನವೇನು ಎಂಬ ಮಾತುಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ. ಪ್ರವಾಸೋದ್ಯಮ ಬರುವುದಕ್ಕಿಂತ ಮೊದಲು ಕಾಡಿನಲ್ಲಿ ಜನರು ಜಾನುವಾರುಗಳುಯಾವುದೇ ಸಂಘರ್ಷ ವಿಲ್ಲದೇ ಪ್ರೀತಿಯಿಂದ ಬದುಕು ನಡೆಸುತ್ತಿದ್ದೆವು ಎಂಬ ಜನರ ಮಾತುಗಳು ಸತ್ಯ ವೆನಿಸುತ್ತಿವೆ. ಇದೇ ಕಾರಣ ದಿಂದ ಗಿರಿಧರ ಕುಲಕರ್ಣಿ ಅವರು ಮಾಹಿತಿ ಕೇಳಿದ್ದಾರೆ ಎಂದು ತಿಳುದು ಬಂದಿದೆ.
