ಸುದ್ಧಿಕನ್ನಡ ವಾರ್ತೆ
ಪಣಜಿ: ವಾಸ್ಕೊ ಜುವಾರಿನಗರದ ಬಿರ್ಲಾ (Birla)  ಪರಿಸರದಲ್ಲಿ ಬುಧವಾರ ಬೆಳಗಿನ ಜಾವ ಇಲ್ಲಿರುವ ಗುಜರಿ ಅಡ್ಡೆಗೆ ಅಗ್ನಿಸ್ಫರ್ಷ ಸಂಭವಿಸಿದ್ದರಿಂದ ಉಂಟಾದ ಭಾರಿ ಜ್ವಾಲೆಗೆ ಸ್ಥಳೀಯರು ಆತಂಕಕ್ಕೊಳಗಾದ ಘಟನೆ ನಡೆದಿದೆ.

ಗುಜರಿ ವಸ್ತುಗಳಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಭಾರಿ ಜ್ವಾಲೆ ಉಂಟಾಗಿ ಸ್ಥಳೀಯರು ಆತಂಕ್ಕೊಳಗಾದ ಘಟನೆ ನಡೆದಿದೆ. ಭಾರಿ ಬೆಂಕಿ ಹತ್ತಿ ಉರಿಯುತ್ತಿದ್ದುದರಿಂದ ಬಿರ್ಲಾ ಪರಿಸರ ಸಂಪೂರ್ಣ ದಟ್ಟ ಹೊಗೆಯಿಂದ ತುಂಬಿಕೊಳ್ಳುವಂತಾಗಿತ್ತು.

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ವಾಸ್ಕೊ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಆಗಮಿಸಿದರು. ಬೆಂಕಿಯ ತೀವೃತೆಯ ಹಿನ್ನೆಕೆಯಲ್ಲಿ ಮುರಗಾಂವ ಅಗ್ನಿಶಾಸಕ ದಳದಿಂದ ಹೆಚ್ಚುವರಿ ಸಹಕಾರ ಪಡೆದುಕೊಳ್ಳಲಾಗಿತು. ಬೆಂಕಿ ನಂದಿಸಲು ಹಲವು ಗಂಟೆಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿದರು.