ಸುದ್ಧಿಕನ್ನಡ ವಾರ್ತೆ
ಪಣಜಿ: 550 ವರ್ಷಗಳ ಇತಿಹಾಸ ಹೊಂದಿರುವ ಗೋವಾದ ಕಾಣಕೋಣದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಮಠದಲ್ಲಿ  (Shri Gokarna parthagali math) ಪ್ರಸಕ್ತ ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ 550 ನೇಯ ವರ್ಧಂತಿ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ನೊವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅನಾವರಣಗೊಳಿಸಲಿರುವ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಮೂರ್ತಿಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಪರ್ತಗಾಳಿ ಮಠದ ಪ್ರವೇಶ ದ್ವಾರದ ಬಳಿಯೇ 77 ಅಡಿ ಎತ್ತರ ಶ್ರೀರಾಮನ ಮೂರ್ತಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಶ್ರೀ ರಾಮನ ಮೂರ್ತಿಯ ಬಳಿ ಶ್ರೀರಾಮಾಯಣ ಪಾರ್ಕ (Ramayana Park)  ನಿರ್ಮಿಸಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ಇದು ಪ್ರಮುಖ ತಿರ್ಥಯಾತ್ರೆ ಮತ್ತು ಸಾಂಸ್ಕøತಿಕ, ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿಪಡೆಯಲಿದೆ.


ಇಲ್ಲಿ 77 ಅಡಿಯ ಶ್ರೀ ರಾಮನ ಮೂರ್ತಿಯ ಬಳಿ 7ಡಿ ಸಭಾಂಗಣ, ವಸ್ತುಸಂಗ್ರಹಾಲಯ, ಬಹು ಉಪಯೋಗಿ ಸಭಾಂಗಣ, ಹಿಸ್ಟೋರಿಕಲ್ ಕಾಂಪ್ಲೆಕ್ಸ ನಿರ್ಮಾಣಗೊಳ್ಳಲಿದೆ. ಶ್ರೀ ರಾಮಾಯಣ ಪಾರ್ಕ ಬಿಲ್ಲಿನ ಆಕೃತಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಸದ್ಯ ಉಧ್ಘಾಟನಾ ಸಮಾರಂಭದ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯ ಹಗಲಿರುಳೆನ್ನದೆಯೇ ಭರದಿಂದ ಸಾಗಿದೆ. ನೂರಾರು ಜನ ಕೆಲಸಗಾರರು ಇಲ್ಲಿ ಹಗಲಿರುಳೆನ್ನದೆಯೇ ರಾಮಾಯಣ ಪಾರ್ಕ ನಿರ್ಮಿಸಲು ಕೆಲಸ ನಿರ್ವಹಿಸುತ್ತಿದ್ದಾರೆ.

ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಮಠದ 550 ನೇಯ ವರ್ಧಂತಿ ಉತ್ಸವದ ನಿಮಿತ್ತ ಪರ್ತಗಾಳಿ ಮಠದ ಪರಿಸರದಲ್ಲಿ ಸ್ಥಾಪಿಸಲಾಗುವ ಶ್ರೀರಾಮನ 77 ಅಡಿ ಎತ್ತರದ ಮೂರ್ತಿ ಆಕರ್ಷಣೆ ಹೆಚ್ಚಲಿದ್ದು ದಕ್ಷಿಣ ಭಾರತದ ಅತ್ಯಂತ ಎತ್ತರದ ಶ್ರೀರಾಮನ ಮೂರ್ತಿ ಇದಾಗಲಿದೆ.