ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ವಿಶ್ವ ಕರಾಟೆ ಮತ್ತು ಕಿಕ್ ಬಾಕ್ಸಿಂಗ್ ಯುನಿಯನ್ ತಫಿಸಾ ಅನಮೋದಿತ ಅಂತರರಾಷ್ಟ್ರೀಯ ಒಲಂಪಿಕ್ ಸಮತಿ,ಹಂದೇಸ್ ಕರಾಟೆ ಸ್ಪೋರ್ಟ್ಸ್ ಸೆಂಟರ (ರಿ)ಸಂಘಟಿತ,ಉತ್ತರಕನ್ನಡ ಕರಾಟೆ ಶಿಕ್ಷಕರ ಕ್ರೀಡಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹೊನ್ನಾವರದಲ್ಲಿ ನಡೆದ ಮೊದಲ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತಾಲೂಕಿನ ಉಳವಿ ಗ್ರಾಮ ಪಂಚಾಯತ ವ್ಯಾಪ್ತಿಯ ಪಾಟ್ನೇಯ,ಜೋಯಿಡಾ ಕರಾಟೆ ತರಬೇತಿ ಕೇಂದ್ರದ ನಿಲೇಶ ಪಾಟ್ನೇಕರ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ.
ಅದೇ ರೀತಿಯಾಗಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಪ್ರಶಸ್ತಿ ಪತ್ರ,ಪದಕ, ಟ್ರೋಪಿಯನ್ನು ಪಡೆದಿರುತ್ತಾರೆ. ಇವರಿಗೆ ಜೋಯಿಡಾ ತಾಲೂಕಿನ ಕರಾಟೆ ಕೇಂದ್ರದ ತರಬೇತುದಾರ ರಾಜೇಶ ಗಾವಡೆ ಎಲ್ಲರಿಗೂ ಉತ್ತಮ ತರಬೇತಿ ನೀಡಿ ಮಾರ್ಗದರ್ಶನ ಮಾಡಿದ್ಡರು.ಇವರ ಸಾಧನೆಗೆ ಗಣ್ಯರು, ಪಾಲಕರು, ಪೋಷಕರು,ಹಿತೈಷಿಗಳು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
