ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ವಾಸ್ಕೊದಲ್ಲಿ ನಿರ್ಮಾಣ ಹಂತದಲ್ಲಿರುವ ಪ್ಲೈ ಓವರ್ ಮೇಲಿಂದ ರಸ್ತೆಯಲ್ಲಿ ಚಲಿಸುತ್ತಿದ್ದ ಕದಂಬ ಸಾರಿಗೆ ಬಸ್ ಮೇಲೆ ಭಾರಿ ಪ್ರಮಾಣದ ಹಬ್ಬಿಣದ ಸರಳಿನ ರಾಶಿ ಬಿದ್ದ ಘಟನೆ ನಡೆದಿದೆ. ಈ ಘಟನೆಯಲ್ಲಿ ಬಸ್ ನಲ್ಲಿದ್ದ ಹಲವು ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಡೆದಿದೆ.
ಕದಂಬ ಬಸ್ ಗೋವಾದ ವಾಸ್ಕೊದಿಂದ ದಾಬೋಲಿಂ ಮಾರ್ಗವಾಗಿ ವೆರ್ಣಾಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆದರೆ ಬಸ್ ಚಾಲಕ ಕೂಡಲೇ ಬಸ್ಸಿನ ವೇಗವನ್ನು ನಿಯಂತ್ರಣಕ್ಕೆ ತಂದಿದ್ದರಿಂದ ಹೆಚ್ಚುತ್ತಿದ್ದ ಭಾರಿ ಅವಘಡ ತಪ್ಪಿದಂತಾಗಿದೆ.

ಗೋವಾದಲ್ಲಿ ಹಲವೆಡೆ ಪ್ಲೈಓವರ್ ನಿರ್ಮಾಣ ನಡೆಯುತ್ತಿದ್ದು ನಿರ್ಮಾಣ ಹಂತದಲ್ಲಿರುವ ಪ್ಲೈ ಓವರ್ ಕೆಳಭಾಗದಲ್ಲಿ ವಾಹನ ಓಡಾಟ ನಡೆಯುತ್ತಿರುತ್ತದೆ. ಇದರಿಂದಾಗಿ ಈ ಹಿನ್ನೆಲೆಯಲ್ಲಿ ಇಂತಹ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಪ್ರಾಣಿಕರು ಆಘ್ರಹಿಸಿದ್ದಾರೆ.