ಸುದ್ದಿ ಕನ್ನಡ ವಾರ್ತೆ
ಗೋವಾ/ಮಡಗಾಂವ: ಭಗವಾನ್ ಬಿರ್ಸಾ‌ಮುಂಡಾರವರ 150 ನೇ ಜನ್ಮ‌ದಿನದ ಪ್ರಯುಕ್ತ ಗೋವಾ ರಾಜ್ಯದ ಮಡಗಾಂವ್ ನಲ್ಲಿ ನಡೆದ ಜನಜಾತಿ ಗೌರವ ದಿವಸ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿಯವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಭಗವಾನ್ ಬಿರ್ಸಾಮುಂಡಾರವರು ಬದುಕಿದ ಕೇವಲ 25 ವರ್ಷಗಳ ಜೀವಿತಾವಧಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಮಾಡಿದ ಹೋರಾಟ,ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಲು ಅವರು ಮಾಡಿದ ಕಾರ್ಯಗಳ ಬಗ್ಗೆ ಮಾತನಾಡಿದರು .

ಈ ಸಂದರ್ಭದಲ್ಲಿ ಗೋವಾ ರಾಜ್ಯದ ‌ಮುಖ್ಯಮಂತ್ರಿಗಳಾದ ಪ್ರಮೋದ ಸಾವಂತರವರು, ಗೋವಾ ವಿಧಾನ ಸಭಾಧ್ಯಕ್ಷರಾದ ಗಣೇಶ ಗಾಂವ್ಕರರವರು‌, ಗೋವಾದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ರಮೇಶ ಬಿ ತಾವಡ್ಕರರವರು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.