ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದಲ್ಲಿ ಮಾರುತಿ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಶನಿವಾರ ಬೆಳಗ್ಗೆ ಸ್ಪಿರಿಟ್ ತುಂಬಿದ ಟ್ಯಾಂಕರ್  ಪಲ್ಟಿಯಾಗಿ ಲಾರಿಗೆ ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ.

ಈ ಘಟನೆ ಎಷ್ಟು ಗಂಭೀರವಾಗಿತೆಂದರೆ ಸ್ಪಿರಿಟ್ ನಿಂದಾಗಿ ಟ್ಯಾಂಕರ್ ಗೆ ಹತ್ತಿದ್ದ ಬೆಂಕಿ ರೌದ್ರಾವತಾರವಾಗಿ ಉರಿದು ಟ್ರಕ್ ಸಂಪೂರ್ಣ ಭಸ್ಮವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ ಶ್ರೀನಿವಾಸ ರೆಡ್ಡಿ ಕರೂರು ಆಂದ್ರಪ್ರದೇಶ ಈ ಲಾರಿಯ ಚಾಲಕ ಹಾರಿ ಪ್ರಾಣವನ್ನು ಉಳಿಸಿಕೊಂಡಿದ್ದಾನೆ.

ಶನಿವಾರ ಬೆಳಗ್ಗೆ ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಚಲಿಸುತ್ತಿದ್ದ ಟ್ಯಾಂಕ‌ರ್ ಲಾರಿ  ಅರಬೈಲ್ ಘಟ್ಟ ಪ್ರದೇಶದಲ್ಲಿ   ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಚಿನ ಮರಕ್ಕೆ ಡಿಕ್ಕಿ ಹೊಡೆಯಿತು. ಆ ವೇಳೆ ನಡೆದ ಘರ್ಷಣೆಗೆ ಬೆಂಕಿ ಹೊತ್ತಿಕೊಂಡಿತೆನ್ನಲಾಗಿದೆ.

. ಕ್ಷಣಮಾತ್ರದಲ್ಲಿ ಇಡೀ ಟ್ಯಾಂಕ‌ರ್ ಹೊತ್ತಿ ಉರಿಯಿತು.ಟ್ಯಾಂಕರಿಗೆ ಬೆಂಕಿ ಬಿದ್ದ ವಿಷಯ ತಿಳಿದ ಬಳಿಕ ಅಗ್ನಿಶಾಮಕ ಸಿಬ್ಬಂದಿಮತ್ತು ಪೋಲಿಸರು ಸ್ಥಳಕ್ಕೆ ತೆರಳಿ ಬೆಂಕಿ ಆರಿಸುವ ಪ್ರಯತ್ನ ಮಾಡಿದರು.

ಆದರೆ ಲಾರಿಯಲ್ಲಿ ಸ್ಪಿರೀಟ್ ಇದ್ದ ಕಾರಣ ಲಾರಿ ಸುಟ್ಟು ಕರಕಲಾಯಿತು.ಪಕ್ಕದಲ್ಲಿದ್ದವರೂ ಭಯಾನಕಗೊಂಡಿದ್ದರು.ಸುದೈವಶಾತ್ ಬೆಂಕಿ ಆರಿಸಿದ್ದರಿಂದ ಊರಿಗೆ ಸ್ಪಿರಿಟ್ ಹರಿದುಹೋಗಿ ಬೆಂಕಿಯ ಅನಾಹುತ ಆಗಲಿಲ್ಲ.ಇಳಿಜಾರಾದ್ದರಿಂದ ಸ್ವಲ್ಪದೂರದವರೆಗೆ ಸ್ಪಿರಿಟ್ ಹರಿದುಹೋಗಿದ್ದು ಬೆಂಕಿಯೂ ಹೊತ್ತಿಕೊಂಡಿತ್ತು. ಈ ದೃಶ್ಯ ಕಂಡ ಪ್ರಯಾಣಿಕರು ಕೂಡ ಬೆಚ್ಚಿಬಿದ್ದಿದ್ದಾರೆ.