ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಗಂಗೋಡಾ ರಸ್ತೆಯನ್ನು ಗ್ರಾಮಸ್ಥರೇ ಮಾಡುವ ಮೂಲಕ ಊರಿಗೆ ಬಸ್ ಬಿಡಿ ಎಂದು ಕೇಳುತ್ತಿದ್ದಾರೆ. ಜೋಯಿಡಾ ತಾಲೂಕಿನ ಹೆಚ್ಚಿನ ಹಳ್ಳಿಗಳಿಗೆ ಸರ್ವ ಋತು ರಸ್ತೆ ಇಲ್ಲ, ಬೇಸಿಗೆಯಲ್ಲಿ ಮಣ್ಣು ಹಾಕಿ ರಸ್ತೆ ಸರಿಪಡಿಸಿಕೊಂಡು ಬಸ್ಸಿಗೆ ಬೇಡಿಕೆ ಸುಲ್ಲಿಸಬೇಕು ಬಸ್ಸು ಬಿಡದೇ ಇದ್ದಾಗ ರಸ್ತೆ ತಡೆ ನಡೆಸಿ ಪ್ರತಿಭಟಿಸಿ ಬಸ್ಸುಬರುವಂತೆ ಮಾಡಿ ಕೊಳ್ಳಬೇಕು ಇದು ಎಲ್ಲ ಹಳ್ಳಿಗರ ಕತೆಯಾಗಿದೆ ಗಾಂಗೋಡಾ ಗ್ರಾಮದ ಜನರ ಕಥೆಯೂ ಇದೇ ಆಗಿದೆ.

ಕಳೆದ ಏಳು ವರ್ಷ ಗಳಿಂದ ಗ್ರಾಮಸ್ಥರೇ ರಸ್ತೆ ನಿರ್ಮಿಸಿಕೊಂಡು ಗಾಂಗೋಡಾಕ್ಕೆ ಬಸ್ ಬಿಡಿ ಎಂದು ಕೇಳಿ ಪ್ರತಿಭಟನೆ ನಡೆಸಿ ಬಸ್ ಒಯ್ಯು ತ್ತಿದ್ದಾರೆ, ಇಲ್ಲಿ ಸರ್ವ ಋತು ರಸ್ತೆ ಹಾಳಾಗಿದ್ದು ಹೊಸ ರಸ್ತೆ ಮಾಡಿ ಕೊಡಿ ಎಂದರೂ ಆಡಳಿತ ಗ್ರಾಮಸ್ಥರ ಬೇಡಿಕೆ ಪೂರೈಸಿಲ್ಲ ಇದರಿಂದ ಈ ವರ್ಷ್ ವೂ ಗ್ರಾಮಸ್ಥರು 7ಕಿ ಮೀ ರಸ್ತೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ದೇಸಾಯಿ ಮತ್ತು ಮಾರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ ಅವರ ನೇತೃತ್ವದಲ್ಲಿ ಗ್ರಾಮಸ್ಥರೇ ಸುಮಾರು 40 ಸಾವಿರಸಕ್ಕೂ ಹೆಚ್ಚು ಹಣ ದಿಂದ ರಸ್ತೆ ನಿರ್ಮಿಸಿ ಸಾಹಸ ಮಾಡಿದ್ದಾರೆ. ಹಾಗಾಗಿವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಅನುಕೂಲ ದ ದೃಷ್ಟಿಯಲ್ಲಿ ರಸ್ತೆ ಸಾರಿಗೆ ಸಂಸ್ಥೆ ಗಾಂಗೋಡಾ ಗ್ರಾಮಕ್ಕೆ ಬಸ್ ಬಿಡಬೇಕು ಬರುವ ಗಾಂಗೋಡಾ ಜಾತ್ರೆ ಒಳಗೆ ಬಸ್ ಬರಲಿ ಎನ್ನುವದು ಗ್ರಾಮಸ್ಥರ ಬೇಡಿಕೆ ಯಾಗಿದೆ