ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ದಾಂಡೇಲಿಯಲ್ಲಿ ಬರುವ ಡಿಸೆಂಬರ್ ನಲ್ಲಿ ನಡೆಯುವ 25 ನೇ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಮ್ಮೇಳನಕ್ಕೆ ಹಿರಿಯ ಸಾಹಿತಿ ಗಳು ಕನ್ನಡಕ್ಕೆ ಹೋರಾಡಿದ ಜಿಲ್ಲಾ ಪ್ರಮುಖರೂ ಆಗಿರುವ ರೋಹಿದಾಸ ನಾಯಕ ಅವರನ್ನು ಆಯ್ಕೆ ಮಾಡಿರುವುದಕ್ಕೆ ಜೋಯಿಡಾ ತಾಲೂಕಿನಲ್ಲಿ ಸಂತಸ ಮನೆಮಾಡಿದೆ.
ಕಳೆದ ಹಲವಾರು ವರ್ಷ ಗಳಿಂದ ಜಿಲ್ಲೆಯಲ್ಲಿ ನಾಡು ನುಡಿ ಕಟ್ಟಿ ಬೆಳೆಸಲು ರೋಹಿದಾಸ್ ನಾಯಕ ಅವರು ಅಪಾರ ಶ್ರಮ ಪಟ್ಟಿದ್ದಾರೆ, ಕನ್ನಡದ ಕೆಲಸದಲ್ಲಿ ಜೋಯಿಡಾ ಜನರನ್ನು ಪ್ರೀತಿಯಿಂದ ಕಂಡಿದ್ದಾರೆ.
ಹಿಂದಿನ ಜಿಲ್ಲಾ ಅಧ್ಯಕ್ಷರು ಗೌರವಾನ್ವಿತರು ಆಗಿ ಹೋದ ಟಿ ಕೆ ಮಹಮ್ಮದ್ ಅವರ ಜೊತೆ ಕನ್ನಡಕ್ಕಾಗಿ ಶ್ರಮ ಪಟ್ಟಿದ್ದರೋಹಿದಾಸ್ ನಾಯಕ ಅವರಿಗೆ ಸಂದ ಗೌರವಕ್ಕೆ ಅವರನ್ನು ಜೋಯಿಡಾ ದ ಜನತೆ ಅಭಿನಂದಿಸಿದ್ದಾರೆ,
